ಮಂಗಳೂರು,ಆ 15 (Daijiworld News/RD): ಪತ್ನಿಯ ಸಾವಿನಿಂದ ನೊಂದು ಅದರ ಅಘಾತದಿಂದ ಹೊರ ಬರದ ಪತಿ, ಆಕೆ ಸತ್ತರೂ ಇನ್ನೂ ನನ್ನ ಜತೆಗಿದ್ದಾಳೆ ಎಂದು ಆಕೆಯನ್ನು ಹುಡುಕುತ್ತಾ ಅದೇ ಆಲಾಪನೆಯಿಂದ ದಿನಕಳೆಯುವ ಪತಿ! ಈ ರೀತಿಯ ಕಥೆಯ ಸಾರವನ್ನು ಹೊಂದಿರುವ ತುಳು ಚಿತ್ರ ಬೆಲ್ಚಪ್ಪ ಆಗಿದ್ದು, ಇದೀಗ ಪ್ರೇಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದ್ದು, ಯಶಸ್ವಿಯಾಗಿ ಚಿತ್ರಮಂದಿರದಲ್ಲಿ ಸಾಗುತ್ತಿದೆ.
ರಜನೀಶ್ ದೇವಾಡಿಗ ನಿರ್ದೇಶನದ " ಬೆಲ್ಚಪ್ಪ " ಸಿನಿಮಾ ಆಗಸ್ಟ್ 9 ರಂದು ಬಿಡುಗಡೆಗೊಂಡಿದ್ದು, ಪ್ರೇಕ್ಷಕ ವರ್ಗಕ್ಕೆ ಒಳ್ಳೆ ಮನರಂಜನೆಯ ಜೊತೆ ಸಂದೇಶವನ್ನು ನೀಡಿದೆ. 14 ದಿನಗಳಲ್ಲಿ ಶೂಟಿಂಗ್ ಮುಗಿಸಿ ದಾಖಲೆ ಬರೆದಿದೆ. ಜಯದುರ್ಗಾ ಪ್ರೊಡಕ್ಷನ್ ಬ್ಯಾನರ್ ನಡಿಯಲ್ಲಿ ತಯಾರಾದ ಈ ಚಿತ್ರ. ಸಿನಿಮಾ ತೆಲಿಪರೆ ಇಪ್ಪಂದೆ ಸಾಧ್ಯನೆ ಇಜ್ಜಿ ಎಂಬ ಅಡಿಬರಹವನ್ನು ಹೊಂದಿದೆ. ಅಂದ ಹಾಗೆ, ನಿರ್ದೇಶಕ ರಜನೀಶ್ ದೇವಾಡಿಗ ಅವರಿಗೆ ಬೆಲ್ಚಪ್ಪ ಎರಡನೇ ಚಿತ್ರವಾಗಿದ್ದು. ಯಾವುದೇ ಕತ್ತರಿ ಪ್ರಯೋಗವಿಲ್ಲದೆ ಸೆನ್ಸರ್ ಮಂಡಳಿಯಿಂದ ಯು ಸರ್ಟಿಫಿಕೇಟ್ ಪಡೆದುಕೊಂಡಿತ್ತು.
ಚಿತ್ರದಲ್ಲಿ ಅರವಿಂದ ಬೋಳಾರ್ ಅವರದ್ದು ಪ್ರಮುಖ ಪಾತ್ರದಲ್ಲಿದ್ದು ಉಳಿದಂತೆ ಉಮೇಶ್ ಮಿಜಾರ್, ದೀಪಕ್ ರೈ ಪಾಣಾಜೆ, ನಾಯಕಿಯಾಗಿ ಯಶಸ್ವಿ ದೇವಾಡಿಗ, ಸುಕನ್ಯಾ ಮುಂತಾದವರು ಚಿತ್ರದಲ್ಲಿ ಅಭಿನಯಿಸಿ ಪಾತ್ರಕ್ಕೆ ಜೀವ ತುಂಬಿದ್ದಾರೆ. ಸದ್ಯ ಥೀಯೇಟರ್ ನಲ್ಲಿ ಸಿನಿಮಾಕ್ಕೆ ಒಳ್ಳೆಯ ಅಭಿಪ್ರಾಯ ಜನರಿಂದ ಬಂದಿದ್ದು, ಬೋಳಾರ್, ದೀಪಕ್ ರೈ ಪಾಣಾಜೆ, ಉಮೇಶ್ ಮಿಜಾರ್ ಅವರ ಪಾತ್ರಗಳಲ್ಲಿ ಹೊಸತನ ತಂದಿದ್ದು ಈ ಚಿತ್ರದಲ್ಲಿ ವಿಶೇಷವಾಗಿತ್ತು.