ಬೆಂಗಳೂರು, ಆ 14 (Daijiworld News/MSP): ಸ್ಯಾಂಡಲ್ ವುಡ್ ನ ಮೋಹಕ ತಾರೆ, ಮಾಜಿ ಸಂಸದೆ, ರಮ್ಯಾ ಅಲಿಯಾಸ್ ದಿವ್ಯಸ್ಪಂದ್ಪನ ಹಸೆಮಣೆ ಏರಲು ತಯಾರಾಗಿದ್ದಾರಂತೆ. ತಮ್ಮ ಬಹುಕಾಲದ ಗೆಳೆಯ ವಿದೇಶಿ ಹುಡುಗನನ್ನು ವರಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಪೋರ್ಚುಗಲ್ ದೇಶದ ರಾಫೆಲ್ ಅವರು ರಮ್ಯಾ ಅವರ ಕೈ ಹಿಡಿಯಲಿದ್ದಾರೆ. ಇವರ ವಿವಾಹ ಶೀಘ್ರವೇ ನಡೆಯಲಿದೆ. ರಾಫೆಲ್ ಹಾಗೂ ರಮ್ಯಾ ಅವರು ಏಳೆಂಟು ವರ್ಷಗಳಿಂದ ರಿಲೇಷನ್ ಶಿಪ್ ನಲ್ಲಿದ್ದರು. ದುಬೈನಲ್ಲಿ ಶೀಘ್ರವೇ ದಾಂಪತ್ಯ ಜೀವನ ಪ್ರವೇಶಿಸಲಿದ್ದಾರೆ ಎಂದು ತಿಳಿದುಬಂದಿದೆ.
ಪುನೀತ್ ರಾಜ್ಕುಮಾರ್ಗೆ ಜೋಡಿಯಾಗಿ 'ಅಭಿ' ಸಿನಿಮಾ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿದ್ದ ರಮ್ಯ, ಆ ಬಳಿಕ ವೃತ್ತಿಜೀವನದಲ್ಲಿ ಉತ್ತುಂಗಕ್ಕೆ ಏರಿದ್ದರು. ಇದೇ ಸಮಯದಲ್ಲಿ ಚಿತ್ರರಂಗದಿಂದ ದೂರ ಸರಿದು, 2013ರಲ್ಲಿ ಮಂಡ್ಯದಿಂದ ಲೋಕಸಭಾ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ ರಮ್ಯಾ ಸಂಸತ್ ಪ್ರವೇಶಿದ್ದರು. ಆದರೆ, 2014ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಸೋಲನ್ನು ಅನುಭವಿಸಿ ಕಾಂಗ್ರೆಸ್ ಪಕ್ಷದ ಸೋಷಿಯಲ್ ಮೀಡಿಯಾ ಉಸ್ತುವಾರಿ ವಹಿಸಿಕೊಂಡಿದ್ದರು. ಲೋಕಸಭೆಯ ಚುನಾವಣೆ ಬಳಿಕ ಸಕ್ರಿಯ ರಾಜಕಾರಣದಿಂದಲೂ ಅಂತರ ಕಾಯ್ದುಕೊಂಡಿದ್ದರು.