ಬೆಂಗಳೂರು,ಆ.09 (Daijiworld News/RD): 2019 ಸಾಲಿನ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಘೋಷಣೆಯಾಗಿದೆ. ಕನ್ನಡ ಚಿತ್ರರಂಗದ ಇತಿಹಾಸದಲ್ಲಿಯೇ ಒಂದೇ ವರ್ಷದಲ್ಲಿ11 ರಾಷ್ಟ್ರ ಪ್ರಶಸ್ತಿ ಲಭಿಸಿರುವುದು ಇದೇ ಪ್ರಥಮವಾಗಿದೆ. 65 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಇದಾಗಿದ್ದು, ನವದೆಹಲಿಯಲ್ಲಿ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ರಾಷ್ಟ್ರ ಪ್ರಶಸ್ತಿಯ ಪಟ್ಟಿಯನ್ನು ಪ್ರಕಟಿಸಿದರು.
ಇದರಲ್ಲಿ ಅತ್ಯುತ್ತಮ ಪ್ರಾದೇಶಿಕ ಸಿನಿಮಾ ಆಗಿ ಶ್ರುತಿ ಹರಿಹರನ್ ಅಭಿನಯಿಸಿದ ನಾತಿಚರಾಮಿ ಆಯ್ಕೆಯಾಗಿದ್ದು, ನಾತಿಚರಾಮಿ ಚಿತ್ರದ ’ಮಾಯಾವಿ ಮಾನವೆ’ ಹಾಡಿನ ಗಾಯಕಿಯಾದ ಬಿಂಧು ಮಾಲಿನಿಗೆ ಅತ್ಯುತ್ತಮ ಮಹಿಳಾ ಗಾಯಕಿ ಪ್ರಶಸ್ತಿ, ಈ ಚಿತ್ರದ ಹಾಡಿನ ಸಾಹಿತ್ಯಕ್ಕೆ ಅತ್ಯುತ್ತಮ ಸಾಹಿತ್ಯ ಪ್ರಶಸ್ತಿ, ಅತ್ಯುತ್ತಮ ಸಂಕಲನ ಪ್ರಶಸ್ತಿ ಲಭಿಸಿದೆ.
ಅತ್ಯುತ್ತಮ ಸಾಹಸ ಚಿತ್ರ ಕೆಜಿಎಫ್ ಆಗಿದೆ, ಅತ್ಯುತ್ತಮ ವಿ ಎಫ್ ಎಕ್ಸ್ ಚಿತ್ರ ಕೆಜಿಎಫ್ ಆಗಿದ್ದು, ಅತ್ಯುತ್ತಮ ರಾಷ್ಟ್ರೀಯ ಏಕತಾ ಚಿತ್ರ ಒಂದಲ್ಲ, ಎರಡಲ್ಲ ಆಗಿದೆ. ಅತ್ಯುತ್ತಮ ಮಕ್ಕಳ ಚಿತ್ರವಾಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಆಯ್ಕೆಯಾಗಿದೆ. ಅತ್ಯುತ್ತಮ ರಾಷ್ಟ್ರೀಯ ಆಕ್ರ್ಸೂಸ್ ಚಿತ್ರವಾಗಿ ಮೂಕಜ್ಜಿಯ ಕನಸುಗಳು ಆಯ್ಕೆಯಾಗಿದೆ. ನಾತಿಚರಾಮಿ ಚಿತ್ರದ ಅಭಿನಯಕ್ಕಾಗಿ ನಟಿ ಶೃತಿ ಹರಿಹರನ್ಗೆ ವಿಶೇಷ ಪ್ರಶಸ್ತಿ ನೀಡಲಾಗಿದೆ.