ಬೆಂಗಳೂರು,ಆ 4 (Daijiworld News/RD): ಸ್ಯಾಂಡಲ್ವುಡ್ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ದುರ್ಯೋಧನನಾಗಿ ಅಭಿನಯಿಸಿರುವ ’ಕುರುಕ್ಷೇತ್ರ’ ಬಿಡುಗೆಡೆಗೆ ಸಜ್ಜಾಗಿದೆ. ಭರ್ಜರಿ ಪ್ರಚಾರದಲ್ಲಿರುವ ಈ ಚಿತ್ರತಂಡ, ಚಿತ್ರದ ಕುರಿತು ಸುದ್ದಿಗೋಷ್ಠಿಯಲ್ಲಿ ದರ್ಶನ್ ನೀಡಿರುವ ಹೇಳಿಕೆ ಇದೀಗ ಸಾಮಾಜಿಕ ಜಲಾತಾಣದಲ್ಲಿ ವೈರಲ್ ಆಗಿದೆ.
ಸುದ್ದಿಗೋಷ್ಠಿಯಲ್ಲಿ ಚಿತ್ರದ ಕುರಿತು ಮಾತನಾಡಿದ ದರ್ಶನ "ಕುರುಕ್ಷೇತ ನಡೆದಿರೋದು, ಎಲ್ಲರೂ ನೋಡಿರೋದು, ಓದಿರೋದು ಬೇರೆಯದ್ದೇ ಇದೆ. ಇದರಲ್ಲಿ ಹಲವು ಆವೃತ್ತಿಗಳಿವೆ, ವಾಲ್ಮೀಕಿ ಬರೆದಿದ್ದೇ ಬೇರೆ ರೀತಿಯಲ್ಲಿದೆ, ಹಾಗಾಗಿ ಇಂತಹ ಮಹಾಕಥೆಯನ್ನು ಆಯ್ಕೆ ಮಾಡಿಕೊಳ್ಳುವಾಗ ತುಂಬಾ ಎಚ್ಚರವಹಿಸಬೇಕಾಗುತ್ತದೆ ಎಂದು ದರ್ಶನ್ ಹೇಳಿದ್ದರು.
ಇದೀಗ ನಟ ದರ್ಶನ್ ಬಾಯ್ತಪ್ಪಿ ಆಡಿದ ಮಾತಿನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಈ ಎಡವಟ್ಟಿನ ಹೇಳಿಕೆಗೆ ಇದೀಗ ಟ್ರೋಲಿಗರ ಆಹಾರವಾಗಿದ್ದಾರೆ.
ಮಹಾಕಾವ್ಯಗಳಾದ ರಾಮಾಯಣವನ್ನು ವಾಲ್ಮೀಕಿ ಹಾಗೂ ಮಹಾಭಾರತವನ್ನು ವ್ಯಾಸರು ಬರೆದಿದ್ದಾರೆ. ಆದರೆ ’ಕುರುಕ್ಷೇತ್ರ’ ಚಿತ್ರದಲ್ಲಿ ಪ್ರಮುಖ ಪಾತ್ರ ದುರ್ಯೋಧನನಾಗಿ ದರ್ಶನ್ ಅಭಿನಯಿಸಿದ್ದು ಅವರಿಗೆ ಈ ಗ್ರಂಥವನ್ನು ಬರೆದವರ ಬಗ್ಗೆಯೇ ಗೊತ್ತಿಲ್ಲವೇ ಎಂಬ ಪ್ರಶ್ನೆಗಳನ್ನು ಕಮೆಂಟ್ ಮಾಡುತ್ತಿದ್ದಾರೆ