ಮಂಗಳೂರು, ಜು 19 (Daijiworld News/RD): ಮೂರೇ ಮೂರು ಪೆಗ್ಗೆ ವಿಡಿಯೋ ಸಾಂಗ್ ಹಿಟ್ ಆಗುವ ಮೂಲಕ ದೊಡ್ಡ ಅಭಿಮಾನಿ ಬಳಗವನ್ನೇ ಸೃಷ್ಟಿಸಿ, ಕನ್ನಡಿಗರ ನಿದ್ದೆಗೆಡಿಸಿದ ರ್ಯಾಪರ್ ಚಂದನ್ ಶೆಟ್ಟಿ ಅಭಿಮಾನಿಗಳಿಗೆ ಶೋಕಿಲಾಲ ರ್ಯಾಪ್ ಸಾಂಗ್ ಮೂಲಕ ರಂಜಿಸಿದ್ದಾರೆ.
ಚಂದನ್ ಶೆಟ್ಟಿ ಅಭಿನಯದ ಶೋಕಿಲಾಲ ರ್ಯಾಪ್ ಸಾಂಗ್ನಲ್ಲಿ ಮಂಗಳೂರು ಮೂಲದ ಅಶ್ವಿತಿ ಶೆಟ್ಟಿ ಅಭಿನಯಿಸಿದ್ದಾರೆ. ಜುಲೈ 17 ರಂದು ಬಿಡುಗಡೆಯಾದ ಶೋಕಿಲಾಲಾ ಹಿಪ್ ಹಾಪ್ ರಾಪ್ ಹಾಡು ಬಿಡುಗಡೆಯಾದ ಎರಡೇ ದಿನಕ್ಕೆ 11.32 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದಿದ್ದು, 3,600ಕ್ಕೂ ಹೆಚ್ಚು ಕಾಮೆಂಟ್ಸ್ ಮಾಡುವ ಮೂಲಕ ಮೂಲಕ ಯೂಟ್ಯೂಬ್ನಲ್ಲಿ ಭರ್ಜರಿ ಸೌಂಡ್ ಮಾಡುತ್ತಿದೆ.
ರ್ಯಾಪ್ ಸಾಂಗ್ ಬಗ್ಗೆ ಮಾತಾಡಿದ ಅಶ್ವಿತಿ ಶೆಟ್ಟಿ , ಶೋಕಿಲಾಲಾದ ಮೂಲಕ ಚಂದನ್ ಶೆಟ್ಟಿಯ ಜೊತೆ ಅಭಿನಯಿಸಿ ಈ ಮೂಲಕ ನನ್ನ ಕನಸು ನನಸಾಯಿತು ಎಂದು ಸಂತಸ ವ್ಯಕ್ತಪಡಿಸಿದರು. ಅಶ್ವಿತಿ ಶೆಟ್ಟಿ ಈಗಾಗಲೇ ಕನ್ನಡದ ಬ್ಲಾಕ್ ಬ್ಲಾಸ್ಟರ್ ಚಿತ್ರವಾದ ‘ಮಿಸ್ಟರ್ ಅಂಡ್ ಮಿಸೆಸ್ ರಾಮಚಾರಿ’ ಚಿತ್ರದಲ್ಲಿ ಅಭಿನಯಿಸುವ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿದ್ದಾರೆ. ನಂತರ ‘ಸುಲಿ’, ಅನಂತು ವರ್ಸ್ ನುಸ್ರತ್ ಸಿನಿಮಾದಲ್ಲಿ ನಟಿಸಿ, ಪ್ರಶಂಶೆಗೆ ಪಾತ್ರರಾಗಿದ್ದಾರೆ. ಇದೇ ಮೊದಲ ಬಾರಿ ಅಶ್ವಿತಿ ಶೆಟ್ಟಿ ಗ್ಲಾಮರ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದು, ಇವರ ಲುಕ್ ಗೆ ವೀಕ್ಷಕರು ಫಿದಾ ಆಗಿದ್ದಾರೆ.
ಈ ಹಾಡಿಗೆ ಸಾಹಿತ್ಯ, ಸಂಗೀತ, ಗಾಯಕ ಹಾಗೂ ನಿರ್ದೇಶನ ಚಂದನ್ ಶೆಟ್ಟಿ ಮಾಡಿದ್ದು, ಈ ಹಾಡು ಮಿಡ್ಲ್ ಕ್ಲಾಸ್ ಹುಡುಗನ ಪರಿಸ್ಥಿತಿಯನ್ನು ಹೇಳುತ್ತದೆ. ಕಡಿಮೆ ಸಂಬಳ ಬರುವ ಹುಡುಗ ನನ್ನ ಲೈಫೇ ಹಿಂಗಾಗಿದೆ..ಎಂದು ಪ್ರತಿದಿನದ ಪರದಾಡುವುದನ್ನು ಹಾಡಿನಲ್ಲಿ ಕೇಳಬಹುವುದು. ಸಂಬಳ ಕಡಿಮೆ, ಸಾಲ ಜಾಸ್ತಿ, ಊಟಕ್ಕೂ ಗತಿ ಇಲ್ಲ.. ಆದರೆ, ಏನೆಲ್ಲಾ ಕನಸು, ಆಸೆಗಳಿವೆ ಎನ್ನುವುದನ್ನು ಎಳೆ ಎಳೆಯಾಗಿ ಹಾಡಿನಲ್ಲಿ ಹೇಳಲಾಗಿದೆ. ಚಿತ್ರೀಕರಣ ಮಾತ್ರ ಚೆನ್ನಾಗಿ ಮೂಡಿ ಬಂದಿದೆ.
ಕರಾವಳಿಯ ಬೆಡಗಿ ಅಶ್ವಿತಿ ಶೆಟ್ಟಿ ಮೊದಲ ಬಾರಿಗೆ ಗ್ಲಾಮ್ ಲುಕ್ನಲ್ಲಿ ಕಾಣಿಸಿಕೊಂಡಿದ್ದು ಅವರ ಅಭಿನಯವನ್ನು ವೀಕ್ಷಕರು ಇಷ್ಟಪಟ್ಟಿದ್ದಾರೆ. ಇವರು ಈ ಹಾಡಿನಲ್ಲಿ ಕೆಲವು ಹಿಪ್ ಹಾಪ್ ಸ್ಟೆಪ್ ಹಾಕುವ ಮೂಲಕ ಈಗಾಗಲೇ ಸೌಂಡ್ ಮಾಡಿದ್ದಾರೆ.