ಮುಂಬೈ, ಜು 16 (Daijiworld News/RD): ಬಹುಭಾಷಾ ತಾರೆ, ಕನ್ನಡ ಕಿಚ್ಚ ಸುದೀಪ್ ಅಭಿನಯದ ಚೊಚ್ಚಲ ಚಲನಚಿತ್ರವಾದ ವರದನಾಯಕ ಬೆಡಗಿ ಸಮೀರಾ ರೆಡ್ಡಿ ಹೆಣ್ಣು ಮಗುವಿಗೆ ಶುಕ್ರವಾರ ಜನ್ಮ ನೀಡಿದ್ದಾರೆ. ಈಗಾಗಲೇ ತಾಯಿ ಮಗಳ ಫೋಟೋ ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದು ಇದನ್ನು ಈಗಾಗಲೇ 39 ಸಾವಿರಕ್ಕೂ ಅಧಿಕ ಮಂದಿ ಲೈಕ್ ಮಾಡುವ ಮೂಲಕ ಶುಭಾಶಯ ತಿಳಿಸಿದ್ದಾರೆ.
2014ರಲ್ಲಿ ಉದ್ಯಮಿ ಅಕ್ಷಯ್ ವಾರ್ದೆ ಅವರನ್ನ ಕೈ ಹಿಡಿದ ಸಮೀರಾರೆಡ್ಡಿ ಮದುವೆಯಾದ ಬಳಿಕ ಚಿತ್ರರಂಗದಿಂದ ಕೊಂಚ ದೂರ ಸರಿದಿದ್ದರು. ತುಂಬು ಗರ್ಭಿಣಿಯಾಗಿರುವಾಗಲೇ ಬಿಕಿನಿ ತೊಟ್ಟು ಅಂಡರ್ ವಾಟರ್ ಫೋಟೋಶೂಟ್ ಮಾಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ತಲ್ಲಣ ಮೂಡಿಸಿದ್ದರು.
ಈಗಾಗಲೇ ಒರ್ವ ಪುತ್ರನಿಗೆ ತಾಯಿಯಾಗಿರುವ ಸಮೀರಾ ರೆಡ್ಡಿ. ಏಕದಶಿ ದಿನವಾದ ಶುಕ್ರವಾರದಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ತಾಯ್ತನದ ಬಗ್ಗೆ ಸಂದರ್ಶನದಲ್ಲಿ ಮಾತನಾಡಿದ ಸಮೀರಾ ರೆಡ್ಡಿ ಹೆಣ್ಣು ಮಗುವಿಗೆ ತಾಯಿಯಾಗಿರುವುದು ಖುಷಿ ನೀಡಿದ್ದು, ಈಗಾಗಲೇ ಸಾಲು ಸಾಲು ಉಡುಗೊರೆಗಳು ಮನೆಗೆ ಬರುತ್ತಿದೆ. ಹೀಗಾಗಿ ಮಗುವಿಗೆ ನಾನು ಪ್ರತ್ಯೇಕವಾಗಿ ಶಾಪಿಂಗ್ ಮಾಡುವ ಅವಶ್ಯಕತೆಯಿಲ್ಲ. ಮಗು ಮುದ್ದಾಗಿ ಬೆಳ್ಳಗೆ ಇದ್ದು, ನನ್ನಷ್ಟು ಕಪ್ಪಿಲ್ಲ ಅನ್ನೋದೆ ಖುಷಿಯ ಸಂಗತಿ ಎಂದಿದ್ದಾರೆ.
ಮಗುವಿನ ಸೌಂದರ್ಯವನ್ನು ಬಣ್ಣಕ್ಕೆ ಹೋಲಿಸಿ ಮಾತನಾಡಿದ ಸಮೀರಾ ರೆಡ್ಡಿಯ ಮಾತುಗಳು ಅಭಿಮಾನಿಗಳಿಂದ ತೀರಾ ಚರ್ಚೆಗೆ ಹಾಗೂ ಟೀಕೆಗೆ ಕಾರಣವಾಗಿದೆ.