ಮುಂಬೈ, ಜು 06 (Daijiworld News/MSP): ಬಾಲಿವುಡ್ ನ ಖ್ಯಾತ ನಟ ರಣವೀರ್ ಸಿಂಗ್ (34) ಇಂದು ಹುಟ್ಟುಹಬ್ಬದ ಸಂಭ್ರಮ. ಆದರೆ ಅವರು ಅಭಿನಯಿಸುತ್ತಿರುವ ಸಿನಿಮಾವೊದರ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಿದ್ದು ಇದನ್ನು ನೋಡಿದ ಅಭಿಮಾನಿಗಳು ಬೆರಗಾಗಿದ್ದಾರೆ.
ಹುಟ್ಟಹಬ್ಬದ ದಿನದಂದು ಅಭಿಮಾನಿಗಳಿಗೆ ಗಿಫ್ಟ್ ನೀಡಿರುವ ರಣವೀರ್ “83” ಹಿಂದಿ ಸಿನಿಮಾದಲ್ಲಿ ಕಪಿಲ್ ದೇವ್ ಪಾತ್ರಧಾರಿಯ ಫಸ್ಟ್ ಲುಕ್ ಪೋಸ್ಟರ್ ಅನ್ನು ಬಿಡುಗಡೆ ಮಾಡಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ಇದು ರಣವೀರ್ ಸಿಂಗಾ ಅಥವಾ ಕಪಿಲ್ ದೇವಾ ಎನ್ನುವ ಕ್ಷಣ ಕಾಲ ಗೊಂದಲಕ್ಕೆ ಒಳಗಾಗಿದ್ದಾರೆ. ಅಷ್ಟು ಸಹಜವಾಗಿದೆ ಕಪಿಲ್ ದೇವ ಅವರ ಹೋಲಿಕೆ.
1983ರ ವಿಶ್ವಕಪ್ ಗೆದ್ದಿರುವ ರೋಚಕ ಹಣಾಹಣಿಯ ಕಥಾಹಂದರ ವನ್ನು “83” ಹಿಂದಿ ಸಿನಿಮಾ ಹೊಂದಿದ್ದು, ಇದರಲ್ಲಿ ಕಪಿಲ್ ಪಾತ್ರದಲ್ಲಿ ರಣವೀರ್ ನಟಿಸುತ್ತಿದ್ದರೆ, ಅವರ ಹೆಂಡತಿ ರೋಮಿ ಭಾಟಿಯಾ ಪಾತ್ರದಲ್ಲಿ ದೀಪಿಕಾ ಪಡುಕೋಣೆ ನಟಿಸುತ್ತಿದ್ದಾರೆ.
ತಮ್ಮ ಇಸ್ಟಾಗ್ರಾಂ ಖಾತೆಯಲ್ಲಿ , "ಇಂದು ನನಗೆ ವಿಶೇಷ ದಿನ - ದ ಹರ್ಯಾಣ ಹರಿಕೇನ್ ಕಪಿಲ್ ದೇವ್ ಎಂದು ಬರೆದುಕೊಂಡಿದ್ದಾರೆ. ಈ ಚಿತ್ರವನ್ನು ಖ್ಯಾತ ನಿರ್ದೇಶಕ ಕಬೀರ್ ಖಾನ್ ನಿರ್ದೇಶಿಸುತ್ತಿದ್ದಾರೆ.