ಬೆಂಗಳೂರು, ಜೂ 05 (Daijiworld News/MSP): ಚಿತ್ರರಂಗದಲ್ಲಿ ಬಾರಿ ಸದ್ದು ಮಾಡುತ್ತಿದೆ ಬಾಟಲ್ ಕ್ಯಾಪ್ ಚಾಲೆಂಜ್. ಹಾಲಿವುಡ್ನಿಂದ ಆರಂಭವಾದ ಚಾಲೆಂಜ್ ಆಟ ಇದೀಗ ಸ್ಯಾಂಡಲ್ವುಡ್ಗೂ ತಟ್ಟಿದೆ. ಅಂದಹಾಗೆ ಬಾಟಲ್ ಕ್ಯಾಪ್ ಚಾಲೆಂಜ್ ಅಂದರೆ ಟೇಬಲ್ ಮೇಲೆ ಬಾಟಲಿಯೊಂದನ್ನು ಇಟ್ಟು, ಅದರ ಮುಚ್ಚಳವನ್ನು ಬಾಟಲಿ ಮೇಲೆ ಸಡಿಲವಾಗಿ ಇರಿಸಬೇಕು.ಆದ ಬಳಿಕ ಸ್ವಲ್ಪ ದೂರದಲ್ಲಿ ನಿಂತು ಒಂದು ಸುತ್ತು ತಿರುಗಿ ಕಾಲಿನಿಂದ ಬಾಟಲಿಯ ಮುಚ್ಚಲವನ್ನು ತೆಗೆಯಬೇಕು. ಆದರೆ ಈ ಸಂದರ್ಭ ಬಾಟಲಿ ಕೆಳಗೆ ಬೀಳಬಾರದು ಇದೇ ಚಾಲೆಂಜ್.
ಹಾಲಿವುಡ್ನಿಂದ ಆರಂಭವಾದ ಈ ಚಾಲೆಂಜ್, ಬಾಲಿವುಡ್ ಹಾಗೂ ಸ್ಯಾಂಡಲ್ ವುಡ್ ಗೂ ತಲುಪಿದೆ. ನಟರು ಹೆಚ್ಚಾಗಿ ಈ ಚಾಲೆಂಜ್ ಸ್ವೀಕರಿಸಿ ಸೋಶಿಯಲ್ ಮೀಡಿಯಾದಲ್ಲಿ ಹರಿಯಬಿಡುತ್ತಿದ್ದಾರೆ. ಆದರೆ ತಾನು ಫಿಟ್ನೆಸ್ ಚಾಲೆಂಜ್ ನಲ್ಲಿ ಕಮ್ಮಿ ಇಲ್ಲ ಎಂದು ಜಿಮ್ ವರ್ಕೌಟ್ ಮಾಡೋ ಸೆಟ್ನಲ್ಲಿ ರಚಿತಾ ರಾಮ್ ಬಾಟಲ್ ಕ್ಯಾಪ್ ಚಾಲೆಂಜ್ ಸ್ವೀಕರಿಸಿ ಗೆದ್ದಿದ್ದಾರೆ.
ಬಾಟಲ್ ಟೇಬಲ್ ಮೇಲಿಟ್ಟು, ಒಂದು ಸುತ್ತು ತಿರುಗಿ ಬಾಟಲ್ ನ ಮುಚ್ಚಳ ಕೆಳಗೆ ಬೀಳುವಂತೆ ಕಾಲಿನಿಂದ ಕಿಕ್ ಮಾಡಿದ್ದಾರೆ. ತಾವು ಮಾಡಿದ ಹೊಸ ಸಾಹಸದ ಚಾಲೆಂಜ್ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.