ಮುಂಬೈ,ಜೂ29(DaijiworldNews/AZM): ಸೂರ್ಯಕಾಂತಿ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ರೆಜಿನಾ ಕಸ್ಸೆಂದ್ರಾ "ನನ್ನ ಸ್ನೇಹಿತರಲ್ಲಿ ಬಹಳ ಜನ ಸಲಿಂಗಕಾಮಿಗಳು" ಎಂದು ಹೇಳುವ ಮೂಲಕ ತಮ್ಮ ರಹಸ್ಯವೊಂದನ್ನು ಹೊರಹಾಕಿ ಬಹಳಷ್ಟು ಸಂಚಲನ ಸೃಷ್ಠಿಸಿದ್ದಾರೆ.
ಬಾಲಿವುಡ್ನಲ್ಲಿ ಚಿತ್ರಗಳಲ್ಲಿ ನಟಿಸಿ ಸಾಕಷ್ಟು ಖ್ಯಾತಿ ಪಡೆದ ನಟಿ ರೆಜಿನಾ ಹೇಳಿದ ಈ ಸಂಗತಿ ಸಹಜವಾಗಿಯೇ ಈಗ ಭಾರಿ ಚರ್ಚೆಗೆ ಕಾರಣವಾಗಿದೆ. ಅಂದ್ರೆ, ಮೊದಲ ಹಿಂದಿ ಸಿನಿಮಾದಲ್ಲಿ ಸೋನಂ ಕಪೂರ್ ಜೊತೆ ನಟಿಸಿದ್ದ ರೆಜಿನಾ ಸಲಿಂಗಕಾಮಿ ಪಾತ್ರ ನಿರ್ವಹಿಸಿದ್ದರು. ಆ ಬಳಿಕ ಅವರು ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದರೂ ಸಿನಿಪ್ರೇಕ್ಷಕರು ಅವರು ಮಾಡಿದ್ದ ಸಲಿಂಗಕಾಮಿ ಪಾತ್ರವನ್ನು ಮರೆತಿಲ್ಲವಂತೆ.
ಸಿನಿರಂಗದಲ್ಲಿರುವವರಿಗೆ ಕಾಂಟ್ರವರ್ಸಿ ಅನ್ನೋದು ಹೊಸತೇನಲ್ಲ. ಇದೀಗ ಟಾಲಿವುಡ್ ಹಾಗೂ ಹಾಲಿವುಡ್ ಸಿನಿಮಾಗಳಲ್ಲಿ ಫುಲ್ ಬ್ಯುಸಿಯಾಗಿರುವ ರೆಜಿನಾ ಸಂದರ್ಶನವೊಂದರಲ್ಲಿ, ಸೋನಂ ಕಪೂರ್ ಜೊತೆ ‘ಏಕ್ ಲಡ್ಕಿ ಕೋ ದೇಖಾ, ತೋ ಐಸಾ ಲಗಾ’ ಸಿನಿಮಾ ಮಾಡಿದ್ದ ವೇಳೆ ನಾನು ಸಲಿಂಗಕಾಮಿ ಪಾತ್ರ ಮಾಡಿದ್ದೆ. ಆ ಪಾತ್ರ ಮಾಡಿದ್ದಕ್ಕೆ ನನ್ನನ್ನು ಮೆಚ್ಚಿಕೊಂಡಿದ್ದರು. ಬಹಳ ಖುಷಿ ಪಟ್ಟಿದ್ದರು” ಅಲ್ಲದೆ ‘ನನ್ನ ಸ್ನೇಹಿತರಲ್ಲಿ ಬಹಳ ಜನ ಸಲಿಂಗಕಾಮಿಗಳು’ ಎಂದು ಹೇಳಿಕೆ ನೀಡಿದ್ದಾರೆ.
ರೆಜಿನಾ ತನ್ನ ಬಾಯ್ಫ್ರೆಂಡ್ ಜೊತೆ ಸೀಕ್ರೆಟ್ ಆಗಿ ಈಗಾಗಲೇ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂಬ ವದಂತಿ ಕೇಳಿ ಬರುತ್ತಿರುವ ಬೆನ್ನಲ್ಲೆ ಸಂದರ್ಶನವೊಂದರಲ್ಲಿ ಎಲ್ಲರನ್ನು ಆಶ್ಚರ್ಯ ಚಕಿತರಾಗುವಂತೆ ಮಾಡಿದ್ದಾರೆ.