ಮೆಲ್ಬೋರ್ನ್, ಜೂ28(Daijiworld News/SS): ಮಿಸ್ ಯೂನಿವರ್ಸ್ ಆಸ್ಟ್ರೇಲಿಯಾ - 2019 ಕಿರೀಟವನ್ನು ಕರಾವಳಿಯ ಚೆಲುವೆ ಪ್ರಿಯಾ ಸೆರಾವೊ ಮುಡಿಗೇರಿಸಿಕೊಂಡಿದ್ದಾರೆ.
ಮೂಲತಃ ಕಾರ್ಕಳ ಸಮೀಪದ ಬೆಳ್ಮಣ್ ನಿವಾಸಿಯಾಗಿರುವ ಪ್ರಿಯಾ ಸೆರಾವೊ ಮಿಸ್ ಯೂನಿವರ್ಸ್ ಆಸ್ಟ್ರೇಲಿಯಾ ಕಿರೀಟವನ್ನು ಮುಡಿಗೇರಿಸಿಕೊಂಡು, ಹೆಮ್ಮೆ'ಯ ಕ್ಷಣವನ್ನು ಸಂಭ್ರಮಿಸಿದ್ದಾರೆ.
ಈ ಸಂಭ್ರಮದ ಕ್ಷಣದ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ನಾನು ಹೆಚ್ಚು ವೈವಿಧ್ಯತೆಯನ್ನು ನೋಡಲು ಬಯಸುತ್ತೇನೆ. ನನಗೆ ಈ ಕ್ಷಣವನ್ನು ನಂಬಲು ಸಾಧ್ಯವಾಗುತ್ತಿಲ್ಲ. ನಾನು ಈ ಅದ್ಭುತ ಕ್ಷಣವನ್ನು ಊಹಿಸಿಯೇ ಇರಲಿಲ್ಲ. ನಿಜಕ್ಕೂ ಈ ಕ್ಷಣ ಅದ್ಭುತವಾಗಿದೆ ಎಂದು ಹೇಳಿದ್ದಾರೆ.
ವಿಶೇಷವೆಂದರೆ, ಮಿಸ್ ಯೂನಿವರ್ಸ್ ಆಸ್ಟ್ರೇಲಿಯಾ ಕಿರೀಟವನ್ನು ಪ್ರಿಯಾ ಸೆರಾವೋ ಅವರಿಗೆ ಗೆಲ್ಲುವ ನಂಬಿಕೆ ಇರಲಿಲ್ಲ. ಹೀಗಾಗಿ ಅವರು ತಮ್ಮ ಕುಟುಂಬವನ್ನು ಕಾಲಿನ್ಸ್ನ ಸೋಫಿಟೆಲ್ ಮೆಲ್ಬೋರ್ನ್ನಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಆಹ್ವಾನಿಸಿರಲಿಲ್ಲ.
ಪ್ರಿಯಾ ಸೆರಾವೊ ತನ್ನ ಬಾಲ್ಯದ ದಿನಗಳನ್ನು ವಿದೇಶದಲ್ಲಿ ಕಳೆದಿದ್ದರು. ಪದವಿ ವ್ಯಾಸಂಗ ಮಾಡಿರುವ ಇವರು, ಮಿಸ್ ಯೂನಿವರ್ಸ್ ಆಸ್ಟ್ರೇಲಿಯಾ ಕಿರೀಟವನ್ನು ಮುಡಿಗೇರಿಸಿಕೊಳ್ಳುವ ಮೊದಲು, ವಕೀಲೆಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಜೊತೆಗೆ ಮಾಡಲಿಂಗ್ ಕ್ಷೇತ್ರದಲ್ಲಿಯೂ ಪ್ರಿಯಾ ಸೆರಾವೊ ಮಿಂಚಿದ್ದರು.