ಮಂಗಳೂರು,ಜೂ27(DaijiworldNews/AZM): ಕೊಂಕಣಿ ಸಿನಿ ಪ್ರೇಕ್ಷಕರಿಗೆ ಇದೊಂದು ಖುಷಿಯ ಸುದ್ದಿ.ಕೊಂಕಣಿ ಸಿನಿಮಾ ಕಂತಾರ್, ಆಗಸ್ಟ್ 9ರಂದು ಮಂಗಳೂರು ಮತ್ತು ಉಡುಪಿ ಥಿಯೇಟರ್ ಗಳಲ್ಲಿ ಪ್ರದರ್ಶನ ಕಾಣಲಿದೆ.
ಜಾನೆಟ್ ನೊರೊನ್ಹಾ ಮತ್ತು ಬಾಲಿವುಡ್ ನಟ ಜಾಕಿ ಶ್ರಾಫ್ ಮುಖ್ಯ ಭೂಮಿಕೆಯ ಈ ವರ್ಷದ ಸೂಪರ್ ಹಿಟ್ ಕೊಂಕಣಿ ಸಿನಿಮಾ ಆಗಿ ಕಂತಾರ್ ದಾಖಲಾಗಿದೆ.
ಸೋಫಿಯಾ- ಎ ಡ್ರೀಮ್ ಗರ್ಲ್ ಎಂಬ ಸಿನಿಮಾಗೆ ಇತ್ತೀಚೆಗಷ್ಟೇ ಕರ್ನಾಟಕ ರಾಜ್ಯ ಪ್ರಶಸ್ತಿ ಪಡೆದಿರುವ ನಿರ್ಮಾಪಕರಾದ ಜನೆತ್ ನರೋನ್ಹಾ ಅವರು ಈ 'ಕಂತಾರ್' ಸಿನಿಮಾವನ್ನು ನಿರ್ಮಿಸಿದ್ದಾರೆ. ನೀಲೇಶ್ ಮಾಲ್ಕಾರ್ ನಿರ್ದೇಶನದ 'ಕಂತಾರ್' ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿತ್ತು. , ಈ ಟ್ರೇಲರ್ ನೋಡಿಯೋ ಕೊಂಕಣಿ ಪ್ರೇಕ್ಷಕರು ಸಿನಿಮಾ ನೋಡಲು ಕಾಯುತ್ತಿದ್ದಾರೆ.