ಮುಂಬೈ, ಜೂ 26 (Daijiworld News/MSP): ಏಳು ವರ್ಷಗಳ ಹಿಂದೆ, ಸನ್ನಿ ಲಿಯೋನ್ ಪೂಜಾ ಭಟ್ ಅವರ ಜಿಸ್ಮ್ 2 ಚಿತ್ರದೊಂದಿಗೆ ಬಾಲಿವುಡ್ ಕಾಲಿಟ್ಟಿದ್ದರು. ಅಂದಿನಿಂದ, ಮಾಜಿ ನೀಲಿಚಿತ್ರ ತಾರೆ ಹಲವಾರು ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. 38 ವರ್ಷದ ನಟಿ ಇದೀಗ ಮುಂಬರುವ ತಮಿಳು ಮತ್ತು ಮಲಯಾಳಂ ನಟನೆಯ ಮೂಲಕ ದಕ್ಷಿಣದಲ್ಲಿ ಮಿಂಚಲು ಸಿದ್ಧರಾಗಿದ್ದಾರೆ. ಮಾತ್ರವಲ್ಲದೆ ಅನೇಕ ಸಾಮಾಜಿಕ ಕಾಳಜಿಯ ಕೆಲಸದಲ್ಲೂ ಅವರು ಗುರುತಿಸಿಕೊಂಡಿದ್ದಾರೆ.
ಇದೀಗ ಬಾಲಿವುಡ್ ತಾರೆ ಸನ್ನಿ ಲಿಯೋನ್ ತಮ್ಮ ಪತಿ ಡೇನಿಯಲ್ ವೆಬರ್ ನೊಂದಿಗೆ ಸೇರಿ ಪುಟಾಣಿಗಳಿಗಾಗಿ ಒಂದು ಶಾಲೆಯನ್ನು ಆರಂಭಿಸಿದ್ದಾರೆ. "ಮಕ್ಕಳ ಸೃಜನಶೀಲತೆಯನ್ನು ಉತ್ತೇಜಿಸುವಂತಿರಬೇಕು. ಕೇವಲ ಪಠ್ಯಪುಸ್ತಕಕ್ಕೆ ಮಾತ್ರ ಸೀಮಿತವಾಗಿರದೇ ಮಕ್ಕಳಿಗೆ ದೈಹಿಕ ಹಾಗೂ ಬೌದ್ಧಿಕ ವಿಕಾಸಕ್ಕೆ ಕಲ್ಪಿಸುವುದು ನಮ್ಮ ಉದ್ದೇಶ. ಮತ್ತು ಸುತ್ತಲಿನ ಪ್ರಪಂಚದ ಆಗುಹೋಗುಗಳನ್ನು ಅನ್ವೇಷಿಸುತ್ತಾ ವಿನೋದವಾಗಿ ಕಲಿಯಬೇಕು ಎನ್ನುವುದು ನಮ್ಮ ಆಸೆ" ಎಂದು ಸ್ವತ ತಾಯಿಯಾಗಿರುವ ಸನ್ನಿ ಲಿಯೋನ್ ಹೇಳಿದ್ದಾರೆ.
ಸನ್ನಿ ತನ್ನ ಪತಿ ಡೇನಿಯಲ್ ವೆಬರ್ ಅವರೊಂದಿಗೆ ಪುಟ್ಟ ಮಕ್ಕಳಿಗಾಗಿ ಕಲಾ ಶಾಲೆಯಾದ "ದಿ ಆರ್ಟ್ ಫ್ಯೂಷನ್" ನ ಹೊಸ ಶಾಖೆಯನ್ನು ತೆರೆಯಲು ಉದ್ದೇಶಿಸಿದ್ದಾರೆ. ಇನ್ನು ಸನ್ನಿ ಲಿಯೋನ್ ಅವರಿಗೆ ಮಕ್ಕಳೆಂದರೆ ತುಂಬಾನೇ ಇಷ್ಟ. ಅವರು ಮೂರು ಮಕ್ಕಳ ತಾಯಿ ಕೂಡ ಆಗಿದ್ದಾರೆ. ಹೀಗಾಗಿ ಮಕ್ಕಳ ಬೆಳವಣಿಗೆಯಲ್ಲಿ ಆರಂಭಿಕ ಅವಧಿ ಅತ್ಯಂತ ಮುಖ್ಯ ಎಂಬುದು ಸನ್ನಿ ಲಿಯೋನ್ ತಿಳಿದುಕೊಂಡಿದ್ದಾರೆ. ಹೀಗಾಗಿ ಶಾಲೆ ಆರಂಭಿಸುವ ಕನಸಿಗೆ ವೆಬರ್ ದಂಪತಿಗಳು ಕೈಜೋಡಿಸಿದ್ದಾರೆ.
ದಿ ಆರ್ಟ್ ಫ್ಯೂಷನ್ ಶಾಲೆಗಾಗಿ ಸನ್ನಿ ಲಿಯೋನ್ ಬಹಳಷ್ಟು ಸಮಯ ತೆಗೆದುಕೊಂಡಿದ್ದಾರೆ. ಮಾತ್ರವಲ್ಲದೆ ತಮ್ಮ ಕನಸಿನ ಶಾಲೆಗಾಗಿ ಸಾಕಷ್ಟು ಕಠಿಣ ಶ್ರಮವನ್ನು ವಹಿಸಿದ್ದಾರೆ. ಇದಕ್ಕಾಗಿ ಸ್ವತಃ ಕುಳಿತು ಶಾಲೆಯೆಂದರೆ ಹೇಗಿರಬೇಕು, ಮಕ್ಕಳ ಸ್ನೇಹಿ ಇಂಟಿರಿಯರ್ಸ್ ಹಾಗೂ ಇತರ ವಿವಿಧ ಸೌಲಭ್ಯಗಳ ಬಗ್ಗೆ ಕೆಲಸ ಮಾಡಿದ್ದಾರೆ. ಈ ಸ್ಕೂಲ್ ಕೇವಲ ಆರ್ಟ್ ಸ್ಕೂಲ್ ಅಲ್ಲದೆ ಪ್ಲೇ ಸ್ಕೂಲ್ ಆಗಿಯೂ ಇರುತ್ತದೆ. ಈ ಶಾಲೆಯಲ್ಲಿ ಮಕ್ಕಳಿಗೆ ಆರ್ಟ್ ಹಾಗೂ ಫ್ಯೂಶನ್ ಕಲಿಯಬಹುದಾಗಿದೆ.