ಮುಂಬೈ, ಜೂ20(Daijiworld News/SS): ಪ್ರಿಯಾಂಕ ಏನೇ ಮಾಡಿದರೂ ಅದು ಟ್ರೋಲಿಗರಿಗೆ ಒಳ್ಳೆಯ ಸರಕಾಗಿ ಪರಿಣಮಿಸುತ್ತಿದೆ. ಬಾಲಿವುಡ್ಗಿಂತ ಹಾಲಿವುಡ್ನಲ್ಲೇ ಹೆಚ್ಚು ಜನಪ್ರಿಯವಾಗುತ್ತಿರುವ ನಟಿ ಪ್ರಿಯಾಂಕ ಚೋಪ್ರಾ ಏನೇ ಮಾಡಿದರೂ ಸುದ್ದಿಯಾಗುತ್ತಲೇ ಇದ್ದಾರೆ. ಇದೀಗ ಪ್ರಿಯಾಂಕ ಚೋಪ್ರಾ ಹಾಕಿಕೊಂಡಿರುವ ಖಾಕಿ ಚಡ್ಡಿ ಹಿಂದೆ ನೆಟ್ಟಿಗರು ಬಿದ್ದಿದ್ದಾರೆ.
ನ್ಯೂಯಾರ್ಕ್'ನ ಅಪಾರ್ಟ್ ಮೆಂಟ್ ಒಂದರಿಂದ ಪತಿ ನಿಕ್ ಜೋಸನ್ ಜೊತೆ ಪ್ರಿಯಾಂಕಾ ಚೋಪ್ರಾ ಹೊರ ಬಿದ್ದಾಗ ಅವರು ಹಾಕಿಕೊಂಡಿದ್ದ ಡಿಫರೆಂಟ್ ಡ್ರೆಸ್ ಇದೀಗ ಟ್ರೋಲಿಗರಿಗೆ ಆಹಾರವಾಗಿದೆ.
ಪ್ರಿಯಾಂಕಾ ಕಪ್ಪು ಬಣ್ಣದ ಟಾಪ್ ಹಾಕಿ, ಖಾಕಿ ಬಣ್ಣದ ಚಡ್ಡಿ ಹಾಕಿ ಕಪ್ಪು ಬಣ್ಣದ ಶೂ ಧರಿಸಿದ್ದರು. ಇದನ್ನು ಟ್ರೋಲಿಗರು ರಾಷ್ಟ್ರೀಯ ಸ್ವಯಂಸೇವಾ ಸಂಘ (ಆರ್ಎಸ್ಎಸ್) ಯೂನಿಫಾರ್ಮ್'ಗೆ ಹೋಲಿಸಿ ಪ್ರಿಯಾಂಕಾ ಕಾಲೆಳೆಯುತ್ತಿದ್ದಾರೆ. ಪ್ರಿಯಾಂಕಾ ಚೋಪ್ರಾ ಆರ್ಎಸ್ಎಸ್'ನ ರಾಯಭಾರಿಯಾಗಿ ಆಯ್ಕೆಯಾಗಿದ್ದಾರೆ ಎಂದು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ.
ಭಾರತದಲ್ಲಿ ಅತೀ ಹೆಚ್ಚು ಟ್ರೋಲ್ ಆಗುತ್ತಿರುವ ನಟಿ ಎಂದರೆ ಅದು ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ. ಪ್ರಿಯಾಂಕಾ ಏನೇ ಮಾಡಿದರು ಅದರಲ್ಲಿ ತಪ್ಪು ಹುಡುಕಿ ನೆಟ್ಟಿಗರು ಕುಹಕವಾಡುತ್ತಿದ್ದಾರೆ.