ನವದೆಹಲಿ,ಜೂ 19 (Daijiworld News/MSP): ಬಾಲಿವುಡ್ಗಿಂತ ಹಾಲಿವುಡ್ನಲ್ಲೇ ಹೆಚ್ಚು ಜನಪ್ರಿಯವಾಗುತ್ತಿರುವ ನಟಿ ಪ್ರಿಯಾಂಕ ಚೋಪ್ರಾ ಅದ್ಯಾಕೋ ಏನೋ ಏನೇ ಮಾಡಿದರೂ ಸುದ್ದಿಯಾಗುತ್ತಾರೆ. ‘ಭಾರತ್’ ಸಿನಿಮಾ ಕೈಬಿಟ್ಟಿದ್ದು, ನಿಕ್ ಜೋನಸ್ ಮದುವೆಯಾಗಿದ್ದು, ಮೆಟ್ ಗಾಲಾದಲ್ಲಿ ವಿಚಿತ್ರವಾಗಿ ಅಲಂಕರಿಸಿಕೊಂಡಿದ್ದು, ಬ್ಲೌಸ್ ಇಲ್ಲದೆ ಸೀರೆಯುಟ್ಟಿದ್ದು ಹೀಗೆ ಸಾಕಷ್ಟು ವಿಚಾರಗಳಲ್ಲಿ ಸುದ್ದಿಯಾಗಿತ್ತಾನೆ ಇದ್ದಾರೆ... ಹೀಗೆ ಪ್ರಿಯಾಂಕ ಚೋಪ್ರಾ ಇದ್ದಲ್ಲಿ ಸುದ್ದಿಗಳಿಗೆ ಕೊರತೆ ಇಲ್ಲ ಎಂಬಂತಾಗಿದೆ. ಈಗಲೂ ಮತ್ತೊಮ್ಮೆ ಪ್ರಿಯಾಂಕ ಸುದ್ದಿಯಾಗಿದ್ದಾರೆ ಅದೂ ಟ್ರೋಲ್ ಮೂಲಕ!
ಬ್ಲೌಸ್ ಇಲ್ಲದೆ ಸೀರೆಯುಟ್ಟು ಟ್ರೋಲ್ ಆಗಿದ್ದ ಪ್ರಿಯಾಂಕಾ ಮತ್ತೆ ಹೊಸ ವಿಚಾರದಲ್ಲಿ ಸುದ್ದಿಯಲ್ಲಿದ್ದಾರೆ. ಕಾಲಿಗೆ ಗಾಯವಾಗಿದ್ದರೂ ಗಂಟಿಗೆ ನೀ ಕ್ಯಾಪ್ ಹಾಕಿಕೊಂಡಿದ್ದರೂ ಹೈ ಹೀಲ್ಸ್ ಧರಿಸಿ ನಡೆದಿಕ್ಕಾಗಿ ಇವರು ಸದ್ಯ ಟ್ರೋಲ್ ಮಾಡೋರಿಗೆ ಆಹಾರವಾಗ್ತಿದ್ದಾರೆ.
ಇತ್ತೀಚೆಗೆ ಸ್ಕೈ ಈಸ್ ಪಿಂಕ್ ಚಿತ್ರದ ಶೂಟಿಂಗ್ ಮುಗಿಸಲು ಭಾರತಕ್ಕೆ ಬಂದಿದ್ದ ಪ್ರಿಯಾಂಕಾ ಆ ಬಳಿಕ ಕ್ಯಾಮೆರಾ ಕಣ್ಣಿನಲ್ಲಿ ಸಿಕ್ಕಿದ್ದು ನ್ಯೂಯಾರ್ಕ್ ಸಿಟಿಯ ಬೀದಿಯಲ್ಲಿ. ಇದರಲ್ಲಿ ಪತಿ ನಿಕ್ ಜೋನಾಸ್ ಕೂಡಾ ಪ್ರಿಯಾಂಕಾ ಜತೆಗಿದ್ದಾರೆ. ಈ ಪೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಇದರಲ್ಲಿ ಪ್ರಿಯಾಂಕ ಚೋಪ್ರಾ ಕಾಲಿಗೆ ನೀ ಕ್ಯಾಪ್ ತೊಟ್ಟಿರೋದು ಕೂಡಾ ಕ್ಯಾಪ್ಚರ್ ಆಗಿದೆ. ಅದು ಕೂಡಾ ಹೈ ಹೀಲ್ಸ್ ಧರಿಸಿ ನೀ ಕ್ಯಾಪ್ ಹಾಕಿರೋದು ಟ್ರೋಲಿಗರ ಕಣ್ಣಿಗೆ ಬಿದ್ದಿದೆ. ಇದೇ ಕಾರಣಕ್ಕೆ, "ಕಾಲಿಗೆ ಏಟಾದ್ರೂ ಹೈ ಹೀಲ್ಸ್ ಬೇಕಿತ್ತಾ ?" ಟ್ರೋಲ್ ಮಾಡ್ತಿದ್ದಾರೆ.
ಮೆಟ್ ಗಾಲಾದಲ್ಲಿ ರೆಡ್ ಕಾರ್ಪೆಟ್ ಮೇಲೆ ಸಿಲ್ವರ್ ಬಣ್ಣದ ವಿಚಿತ್ರ ವೇಷಭೂಷಣದಲ್ಲಿ ಕಾಣಿಸಿಕೊಂಡಿದ್ದ ಪಿಗ್ಗಿ ಸಿಲ್ವರ್ ಹೈ ಹೀಲ್ಸ್ ಧರಿಸಿದ್ದರು. ಈ ಸ್ಯಾಂಡಲ್ ಬೆಲೆ 44 ಸಾವಿರ ಎಂದು ಅಂದು ಸುದ್ದಿಯಾಗಿತ್ತು.