ಮುಂಬೈ, ಏ.16 (DaijiworldNews/AA): ನಟಿ ರಶ್ಮಿಕಾ ಮಂದಣ್ಣ ಅಭಿಸಯಿಸಿದ 'ಸಿಕಂದರ್' ಸಿನಿಮಾದ ಸೋಲಿನ ಬೆನ್ನಲ್ಲೇ ಬಾಲಿವುಡ್ನ 'ಥಾಮಾ' ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಇತ್ತೀಚೆಗೆ ಸಲ್ಮಾನ್ ಖಾನ್ಗೆ ನಾಯಕಿಯಾಗಿ ನಟಿಸಿದ ಬಾಲಿವುಡ್ನ 'ಸಿಕಂದರ್' ಸಿನಿಮಾ ನಿರೀಕ್ಷೆಯಷ್ಟು ಗಳಿಸದೆ ಹೀನಾಯ ಸೋಲನ್ನು ಕಂಡಿತ್ತು. ಆದಾಗ್ಯೂ ಬಾಲಿವುಡ್ನಲ್ಲಿ ರಶ್ಮಿಕಾ ಮಂದಣ್ಣಗೆ ಇರುವ ಬೇಡಿಕೆ ಕಮ್ಮಿಯಾಗಿಲ್ಲ.
ಸದ್ಯ ರಶ್ಮಿಕಾ ಮಂದಣ್ಣ 'ಥಾಮಾ' ಚಿತ್ರದ ಶೂಟಿಂಗ್ನಲ್ಲಿ ಭಾಗಿಯಾಗಿದ್ದಾರೆ. ಈ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ. ಡೈರೆಕ್ಟರ್ ಅದಿತ್ಯ ಅವರು ಈ ಸಿನಿಮಾದ ನಿರ್ದೇಶಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಆಯುಷ್ಮಾನ್ ಖುರಾನಾಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ.
ಜೊತೆಗೆ ಚಿತ್ರದಲ್ಲಿ ಪರೇಶ್ ರಾವಲ್ ಮತ್ತು ನವಾಜುದ್ದೀನ್ ಸಿದ್ದಿಕಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ವರ್ಷ ಅಕ್ಟೋಬರ್ 19ರಂದು ಸಿನಿಮಾ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ತಿಳಿಸಿದೆ.