ಬೆಂಗಳೂರು,ಜೂ16(Daijiworld News/AZM):ಇಂದು ವರ್ಲ್ಡ್ ಫಾದರ್ಸ್ ಡೇ(ವಿಶ್ವ ಅಪ್ಪಂದಿರ ದಿನ) ಈ ದಿನದಂದೇ ನಟಿ ರಾಧಿಕಾ ಪಂಡಿತ್ ಅವರು ತಮ್ಮ ಮಗಳ ಜೊತೆ ಆಕೆಯ ಅಪ್ಪಾ ಇರುವ ಫೋಟೋ ಒಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದು, ಈ ಫೋಟೋ ಇದೀಗ ಭಾರೀ ಶೇರ್ ಆಗುತ್ತಿದೆ. ಹಾಗೂ ಲೈಕ್ ಗಳು ಬೀಳುತ್ತಿವೆ.
ಯಶ್-ರಾಧಿಕಾ ಅಭಿಮಾನಿಗಳು ಈ ಫೋಟೋವನ್ನು ನೋಡಿ ಸಖತ್ ಇಷ್ಟಪಟ್ಟು ಲೈಕ್ ಹಾಗೂ ಶೇರ್ ಮಾಡುತ್ತಿದ್ದಾರೆ. ಸ್ವಲ್ಪ ದಿನಗಳ ಮೊದಲು ರಾಧಿಕಾ ತಮ್ಮ ಮುದ್ದು ಮಗಳ ಫೋಟೋವನ್ನು ರಿವೀಲ್ ಮಾಡಿದ್ದರು. ಅಂದಿನಿಂದ ಸೋಷಿಯಲ್ ಮೀಡಿಯಾದಲ್ಲಿ ಯಶ್-ರಾಧಿಕಾ ಮಗಳ ಪೋಟೋ ಸಖತ್ ಟ್ರೆಂಡ್ ಸೃಷ್ಟಿ ಮಾಡುತ್ತಿದೆ.
ಮುದ್ದುಮಗಳು ಹಾಗೂ ಸೂಪರ್ ಹೀರೋ ಯಶ್ ಬಗ್ಗೆ ಅಪ್ಪಂದಿರ ದಿನವಾದ ಇಂದು ಎಲ್ಲ ಕಡೆಗಳಿಂದ ಮೆಚ್ಚುಗೆಯ ಮಹಾಪೂರ ಹರಿದು ಬರುತ್ತಿದೆ. ತಮ್ಮ ಮಗಳು, ಹಾಗೂ ಆಕೆಯ ಅಪ್ಪನ ಫೋಟೋವನ್ನು ಫೋಸ್ಟ್ ಮಾಡಿರುವ ರಾಧಿಕಾ "ಅವಳನ್ನು ಯಾವತ್ತೂ ಮೆರೆಸಲಿರುವ, ಪ್ರತಿಯೊಬ್ಬ ಮಗಳ ಮೊಟ್ಟಮೊದಲ ಸೂಪರ್ ಹೀರೋ ಅವಳಪ್ಪನ ಕತ್ತನ್ನು ಈ ಪುಟ್ಟ ಕೈಗಳು ಬಳಸಿ ಗಟ್ಟಿಯಾಗಿ ಹಿಡಿದುಕೊಂಡಿವೆ ಎಂಬುದು ನನಗೆ ಗೊತ್ತು. ಎಲ್ಲ ಅದ್ಭುತ ಸೂಪರ್ ಹೀರೋಗಳಾದ ಅಪ್ಪಂದಿರಿಗೆ ಇಂದಿನ ಅಪ್ಪಂದಿರ ದಿನದ ಸ್ಪೆಷಲ್ ಶುಭಾಶಯಗಳು" ಎಂದು ಮಗಳ ಪರವಾಗಿ ಪೋಸ್ಟ್ ಮಾಡಿ ತಮ್ಮ ಖುಷಿಯನ್ನು ಹಂಚಿಕೊಂಡಿದ್ದಾರೆ.
ಅಪ್ಪಂದಿರ ದಿನದಂದು ಈ ಅಪ್ಪ ಮಗಳ ಫೋಟೋಗೆ ಸಾಕಷ್ಟು ಶೇರ್ ಹಾಗೂ ಲೈಕ್ ಗಳು ಬಿದ್ದಿವೆ.