ಅಮೇರಿಕಾ,ಜೂ15(Daijiworldnews/AZM):ಅಮೇರಿಕಾದಲ್ಲೂ ಮಿಂಚುತ್ತಿದ್ದಾರೆ ಸ್ಯಾಂಡಲ್ ವುಡ್ ನ ಖ್ಯಾತ ಗಾಯಕ ವಿಜಯ್ ಪ್ರಕಾಶ್. ಹೌದು ಅಮೇರಿಕಾದಲ್ಲಿ ಇನ್ನು ಮುಂದೆ ಮೇ ೧೨ರಂದು ವಿಜಯ್ ಪ್ರಕಾಶ್ ಡೇ ಎಂದು ಆಚರಿಸಲಾಗುತ್ತದೆ.ಇದು ಕನ್ನಡ ಗಾಯಕನಿಕೆ ಸಿಕ್ಕ ಅತೀ ದೊಡ ಸನ್ಮಾನ ಎಂದೇ ಹೇಳಬಹುದು.
ಮೇ 12ರಂದು ವಿಜಯ್ ಪ್ರಕಾಶ್ ನಾರ್ತ್ ಕರೋಲಿನಾದಲ್ಲಿ ಮ್ಯೂಸಿಕ್ ಶೋ ನಡೆಸಿದ್ದರು. ಈ ಶೋ ಅಮೇರಿಕಾದಲ್ಲಿ ಹೌಸ್ಫುಲ್ ಪ್ರದರ್ಶನ ಕಂಡಿತ್ತು. ಜೊತೆಗೆ ಈ ಸಮಾರಂಭಕ್ಕೆ ಮೇಯರ್ ಆಓರ್ ದಿ ಸಿಟಿ ಆಫ್ ಕಾಂಕರ್ಡ್ರವರು ಭಾಗವಹಿಸಿದ್ದರು.
ವಿಜಯ್ ಪ್ರದರ್ಶನ ನೀಡಿದ ಪರಿ ಕಂಡು ಖುಷಿಯಾದ ಅಮೇರಿಕಾ ಜನತೆ ಈ ಮೂಲಕ ಅವರಿಗೆ ಅಚ್ಚಳಿಯದೆ ಉಳಿದಿರೋ ಗಿಫ್ಟ್ವೊಂದನ್ನು ನೀಡಿದ್ದಾರೆ. ಅದೇ ಮೇ 12ನ್ನು ವಿಜಯ್ ಪ್ರಕಾಶ್ ಡೇ ಅಂತಾ ಆಚರಿಸಲು ಮೇಯರ್ ಅಧಿಕೃತ ಘೋಷಣೆ ಮಾಡಿದ್ದಾರೆ.