ನವದೆಹಲಿ, ಫೆ.25 (DaijiworldNews/AA): ನಟ ಗೋವಿಂದ ಮತ್ತು ಅವರ ಪತ್ನಿ ಸುನೀತಾ ಅಹುಜಾ 37 ವರ್ಷಗಳ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ.

ಇಬ್ಬರು ಕೆಲವು ದಿನಗಳಿಂದ ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದಾರೆ. ಇವರಿಬ್ಬರು ವಿಚ್ಛೇದನ ಪಡೆಯಲು ಮುಂದಾಗಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಆದರೆ ಗೋವಿಂದ ಅಥವಾ ಅವರ ಪತ್ನಿ ಸುನೀತಾ ಅವರಾಗಲಿ ವಿಚ್ಛೇದನದ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.
ಗೋವಿಂದ ಮತ್ತು ಸುನೀತಾ ಅಹುಜಾ ಅವರ ನಡುವಿನ ಜೀವನಶೈಲಿಯ ಕಾರಣದಿಂದ ಸಂಬಂಧದಲ್ಲಿ ಬಿರುಕು ಮೂಡಿದೆ. ಅಲ್ಲದೇ ಗೋವಿಂದ ಅವರ ಮರಾಠಿ ನಟಿಯೊಂದಿಗಿನ ಸಂಬಂಧ ವಿಚ್ಛೇದನ ಕಾರಣವಾಗಿದೆ ಎಂದು ಹೇಳಲಾಗಿದೆ.
ಸುನೀತಾ ಮತ್ತು ಗೋವಿಂದ ಅವರ ಜೀವನ ಶೈಲಿ ನಡುವೆ ಸಾಕಷ್ಟು ವ್ಯತ್ಯಾಸ ಉಂಟಾಗಿದೆ. ಹೀಗಾಗಿ ಅನ್ಯೋನ್ಯವಾಗಿದ್ದ ದಂಪತಿ ನಡುವೆ ಈಗ ಕಿರಿಕ್ ಶುರುವಾಗಿದೆ ಎನ್ನಲಾಗಿದೆ. ಹಾಗಾಗಿ ಒಂದಷ್ಟು ಸಮಯದಿಂದ ಅವರು ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದಾರೆ. ಜೊತೆಗೆ ಗೋವಿಂದ ಹಾಗೂ ಮರಾಠಿ ನಟಿಯೊಂದಿಗಿನ ಸಂಬಂಧದ ಕಾರಣದಿಂದಲೇ ಸುನೀತಾ ಅವರು ವಿಚ್ಛೇದನ ನೀಡಲು ನಿರ್ಧರಿಸಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.