ಬೆಂಗಳೂರು, ಜೂ11(Daijiworld News/SS): ಭುಜದ ನೋವಿನಿಂದ ಬಳಲುತ್ತಿರುವ ಸ್ಯಾಂಡಲ್ವುಡ್ ನಟ ಶಿವರಾಜ್ಕುಮಾರ್ ಲಂಡನ್ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಬಲಭುಜದಲ್ಲಿ ನೋವು ಕಾಣಿಸಿಕೊಂಡಿದ್ದರಿಂದಾಗಿ ಜು. 9ರಂದು ಲಂಡನ್ಗೆ ತೆರಳಲಿರುವ ಅವರು, ಲಂಡನ್ನಲ್ಲಿಯೇ ಸಣ್ಣ ಸರ್ಜರಿ ಮಾಡಿಸಲಿದ್ದಾರೆ. ಒಂದು ತಿಂಗಳು ಲಂಡನ್ನಲ್ಲೇ ಇದ್ದು ಚಿಕಿತ್ಸೆ ಪಡೆದ ಬಳಿಕ ತವರಿಗೆ ಮರಳಲಿದ್ದಾರೆ ಎನ್ನಲಾಗಿದೆ.
ಸದ್ಯ ಸ್ಯಾಂಡಲ್ವುಡ್ ನಟ ಶಿವರಾಜ್ಕುಮಾರ್ ಅವರ ರಸ್ತುಂ ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದು, ದ್ರೋಣ ಹಾಗೂ ಆನಂದ್ ಸಿನಿಮಾಗಳ ಶೂಟಿಂಗ್ ಮುಗಿಸಿ ತೆರಳಲಿದ್ದಾರೆ ಎಂದು ಹೇಳಲಾಗಿದೆ.
ಮಾತ್ರವಲ್ಲ, ಜುಲೈ 12 ರಂದು ಶಿವರಾಜ್ ಕುಮಾರ್ ಅವರ 57ನೇ ವರ್ಷದ ಹುಟ್ಟುಹಬ್ಬವಿದೆ. ಈ ಬಾರಿ ಶಿವಣ್ಣ ಹುಟ್ಟು ಹಬ್ಬ ಆಚರಿಸಲು ಅವಕಾಶ ಸಿಗದ ಕಾರಣ ಅಭಿಮಾನಿಗಳು ನಿರಾಶೆಗೊಂಡಿದ್ದಾರೆ.