ನವದೆಹಲಿ, ಜೂ 8 (Daijiworld News/MSP): ಮದುವೆ ಬಳಿಕ ಪ್ರಿಯಾಂಕಾ ಚಿತ್ರವಿಚಿತ್ರ ಉಡುಪುಗಳನ್ನು ತೊಟ್ಟು, ಹುಚ್ಚುಹುಚ್ಚಾಗಿ ಮೇಕಪ್ ಮಾಡಿಕೊಂಡು ಸದಾ ಟ್ರೋಲ್ ಪೇಜ್ ಗಳಿಗೆ ಆಹಾರವಾಗುತ್ತಾರೆ. ’ಪ್ರಿಯಾಂಕಾ ಮದುವೆಯಾದ ನಂತರ ಸಂಪೂರ್ಣ ಬದಲಾಗಿದ್ದಾರೆ, ಅವರ ವೇಷಭೂಷಣ, ನಡತೆಗಳು ಬದಲಾಗಿವೆ ’ ಎಂದು ನೆಟ್ಟಿಗರು ಮಾತನಾಡಿಕೊಳ್ಳವಂತಾಗಿದೆ.
ನಿಕ್ ಜಾನ್ ಮದುವೆಯಾದ ನಂತರ ಪ್ರಿಯಾಂಕಾ ಬಾಲಿವುಡ್ ಕಡೆ ಬರೋ ಸೂಚನೆ ಕಾಣಿಸುತ್ತಿಲ್ಲ. ಸಿನಿಮಾ ಮಾಡುವುದನ್ನು ಬಿಟ್ಟು ತನ್ನ ಚಿತ್ರವಿಚಿತ್ರ ಡ್ರೆಸ್ ಗಳಿಂದಲೇ ಪ್ರಿಯಾಂಕಾ ಹೆಚ್ಚಾಗಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗುತ್ತಿದ್ದಾರೆ.
ಇದೀಗ ಬ್ಲೌಸ್ ಧರಿಸದೆ ಸೀರೆ ಉಟ್ಟು ಮತ್ತೆ ಸುದ್ದಿಯಾಗಿದ್ದಾರೆ. ಬ್ಲೌಸ್ ಹಾಕದೆ ಹಿಪ್ ಹಾಪ್ ಸೀರೆ ಡ್ಯಾನ್ಸ್ ಮಾಡಿರುವ ಪ್ರಿಯಾಂಕಾ ಅವತಾರಕ್ಕೆ ಹಲವು ನೆಟ್ಟಿಗರು ಗರಂ ಆಗಿದ್ದು, ಭಾರತೀಯ ಸಂಸ್ಕೃತಿಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಕಮೆಂಟ್ ಗಳ ಸುರಿಮಳೆ ಹಾಕಿದ್ದಾರೆ. ಸೀರೆ ದೇಹ ಮುಚ್ಚಿಕೊಳ್ಳುವುದಕ್ಕೆ ಇರುವುದು, ವಿಚಿತ್ರವಾಗಿ ಉಟ್ಟುಕೊಂಡು ದೇಹ ತೋರಿಸುವುದಕ್ಕಲ್ಲ ಎಂದು ಟೀಕಿಸಿದ್ದಾರೆ.
ಪ್ರಿಯಾಂಕಾ ಅವರ ಈ ಹಾಟ್ ಫೋಟೋಗಳು ಹಾಗೂ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಗೋಲ್ಡನ್ ಬಣ್ಣದ ಸೀರೆಯುಟ್ಟು ತಮ್ಮ ಬೆನ್ನನ್ನು ಎಕ್ಸ್ ಪೋಸ್ ಮಾಡಿ ವಿಚಿತ್ರವಾಗಿ ಡಾನ್ಸ್ ಮಾಡಿದ್ದಾರೆ