ಬೆಂಗಳೂರು,ನ.15(DaijiworldNews/TA):ಹಾಲಿವುಡ್ ನಟಿಯೊಬ್ಬರು ಯಶ್ ಜೊತೆಗೆ ಹಳೆಯ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಹಾಲಿವುಡ್ ನಟಿ ಟೆಟಿಯಾನಾ ಗೈದರ್ ಜೊತೆ ಯಶ್ ಕಾಣಿಕೊಂಡಿರುವ ವೀಡಿಯೋ ತುಣುಕೊಂದು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.
ಟಾಕ್ಸಿಕ್’ ಸಿನಿಮಾದ ಪ್ರೀ ಪ್ರೊಡಕ್ಷನ್ ಸಂದರ್ಭದಲ್ಲಿ 2022 ರ ಸೆಪ್ಟೆಂಬರ್ ತಿಂಗಳಲ್ಲಿ ಯಶ್ ಅಮೆರಿಕಕ್ಕೆ ತೆರಳಿದ್ದರು. ಈ ವೇಳೆ ಅಲ್ಲಿನ ಶೂಟಿಂಗ್ ಯಾರ್ಡ್ ಒಂದರಲ್ಲಿ ಯಶ್ ಶೂಟಿಂಗ್ ಮಾಡುತ್ತಿರುವ ವಿಡಿಯೋ ಒಂದನ್ನು ಹಂಚಿಕೊಂಡಿದ್ದರು. ವಿಡಿಯೋದಲ್ಲಿ ಜೆಜೆ ಪೆರ್ರಿ ಮತ್ತು ಇನ್ನೂ ಕೆಲವರಿದ್ದರು. ಅದರಲ್ಲಿ ಒಬ್ಬರು ಹಾಲಿವುಡ್ ನಟಿ ಟಿಟಿಯಾನಾ ಗೈಡರ್. ಆಕ್ಷನ್ ಅಸಿಸ್ಟೆಂಟ್ ಆಗಿರುವ ಟಿಟಿಯಾನಾ ಇದೀಗ ಯಶ್ ಜೊತೆಗಿನ ವಿಡಿಯೋ ಒಂದನ್ನು ಹಂಚಿಕೊಂಡು ಸುದ್ದಿಯಾಗಿದ್ದಾರೆ.
ಟಿಟಿಯಾನಾ ಗೈಡರ್, ಅದೇ ಶೂಟಿಂಗ್ ಯಾರ್ಡ್ನಲ್ಲಿ ಶೂಟಿಂಗ್ ಮಾಡುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದು, ವಿಡಿಯೋದ ನಡುವೆ ಯಶ್ರ ‘ಕೆಜಿಎಫ್ 2’ ಸಿನಿಮಾದ ದೃಶ್ಯಗಳನ್ನು ಸಹ ಸೇರಿಸಿದ್ದಾರೆ. ಟಿಟಿಯಾನಾ ಗೈಡರ್ ಅವರ ಅದ್ಭುತ ಶೂಟಿಂಗ್ ಸ್ಕಿಲ್ಗಳನ್ನು ನೋಡಿ ಅಲ್ಲಿದ್ದವರು ಮೆಚ್ಚಿಕೊಂಡಿದ್ದಾರೆ. ನಟ ಯಶ್ ಸಹ ಟಿಟಿಯಾನಾರ ಸ್ಕಿಲ್ ನೋಡಿ ಭೇಷ್ ಎಂದಿದ್ದಾರೆ.