ಮುಂಬೈ, ಜೂ04(Daijiworld News/SS): ಅವಕಾಶ ಸಿಕ್ಕಿದರೆ ನಾನು ಭಾರತದ ಪ್ರಧಾನಿ ಆಗುತ್ತೇನೆ ಎಂದು ಗ್ಲೋಬಲ್ ಸ್ಟಾರ್ ಪ್ರಿಯಾಂಕಾ ಚೋಪ್ರಾ ಹೇಳಿದ್ದಾರೆ.
ಅಮೆರಿಕದ ನಿಯತಕಾಲಿಕೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಪ್ರಿಯಾಂಕಾ ಚೋಪ್ರಾ ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ಅವಕಾಶ ಸಿಕ್ಕಿದರೆ ನಾನು ಭಾರತ ಪ್ರಧಾನಿ ಆಗಲು ಬಯಸುತ್ತೇನೆ. ನನ್ನ ಪತಿ ಅಮೆರಿಕ ಅಧ್ಯಕ್ಷ ಪದವಿಯನ್ನು ಬಯಸುತ್ತಾರೆ. ನನಗೆ ರಾಜಕೀಯದ ಜತೆಗೆ ತಳುಕು ಹಾಕಿಕೊಂಡಿರುವ ಅಂಶಗಳೆಂದರೆ ಇಷ್ಟವಿಲ್ಲ. ಆದರೆ ದೇಶದಲ್ಲಿ ಬದಲಾವಣೆ ಬರಬೇಕೆಂದು ನಾನು, ನಿಕ್ ಬಯಸುತ್ತಿದ್ದೇವೆ ಎಂದು ಹೇಳಿದ್ದಾರೆ.
ಸದ್ಯಕ್ಕೆ ಪ್ರಿಯಾಂಕಾ ಚೋಪ್ರಾ ಹಾಲಿವುಡ್ ಪ್ರಾಜೆಕ್ಟ್ಗಳಲ್ಲಿ ಬಿಝಿಯಾಗಿದ್ದಾರೆ. ಬಾಲಿವುಡ್ನಲ್ಲಿ 'ದಿ ಸ್ಕೈ ಈಸ್ ಪಿಂಕ್' ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಶೀಘ್ರದಲ್ಲೇ ಈ ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ.