ಮುಂಬೈ,ಜೂ03(Daijiworld News/AZM):ಭಾರತ ಪ್ರಧಾನಿ ನರೇಂದ್ರ ಮೋದಿ ಜತೆಗೆ ಡಿನ್ನರ್ ಮಾಡಬೇಕೆಂದು ಬಾಲಿವುಡ್ ನಟಿ ಕತ್ರಿನ ಕೈಫ್ ತಮ್ಮ ಆಸೆಯನ್ನು ವ್ಯಕ್ತಪಡಿಸಿದ್ದಾರೆ.
"ನಿಮಗೆ ಯಾರೊಂದಿಗೆ ಡಿನ್ನರ್ ಮಾಡಬೇಕೆಂಬ ಆಸೆ ಇದೆ, ಮೂವರ ಹೆಸರು ತಿಳಿಸಿ?" ಎಂಬ ಮಾಧ್ಯಮವೊಂದರ ಪ್ರಶ್ನೆಗೆ ಉತ್ತರಿಸಿದ ಕತ್ರಿನಾ ಮರ್ಲಿನ್ ಮನ್ರೋ, ನರೇಂದ್ರ ಮೋದಿ ಜಿ, ಕಂಡೋಲಿಜಾ ರೈಸ್" ಎಂದು ಹೆಳಿಕೊಂಡಿದ್ದಾರೆ.
ಕೂಡಲೆ ಅಲ್ಲೇ ಇದ್ದ ಬಾಲಿವುಡ್ ನಟ ಸಲ್ಮಾನ್ ಖಾನ್, "ಪಟ್ಟಿಯಲ್ಲಿ ಸಲ್ಮಾನ್ ಖಾನ್ ಎಲ್ಲಿದ್ದಾನೆ?" ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿರುವ ಕತ್ರಿನಾ, "ಇದುವರೆಗೂ ನಾನು ಯಾರ ಜತೆಗೆ ಡಿನ್ನರ್ ಮಾಡಿಲ್ಲವೋ ಅವರ ಬಗ್ಗೆ ಮಾತನಾಡುತ್ತಿದ್ದೇವೆ. ನಿಜ ಹೇಳಬೇಕೆಂದರೆ ನಾನು ಎಂದೂ ಸಲ್ಮಾನ್ ಜತೆಗೆ ಡಿನ್ನರ್ ಮಾಡಿಲ್ಲ. ಯಾಕೆಂದರೆ ಅವರು ಡಿನ್ನರ್ ಹೊರಗೆ ಮಾಡಲ್ಲ" ಎಂದಿದ್ದಾರೆ ಕತ್ರಿನಾ.
ಕತ್ರಿನಾರ ಮಾತಿಗೆ ಪ್ರತಿಕ್ರಿಯಿಸಿರುವ ಸಲ್ಲು, "ಆಕೆ (ಕತ್ರಿನಾ) ಸಂಜೆ 6.30ಕ್ಕೆ ಡಿನ್ನರ್ ಮಾಡುತ್ತಾರೆ. ಆಗ ನಾನು ಲಂಚ್ ಮಾಡುತ್ತೇನೆ" ಎಂದು ಹಾಸ್ಯ ಚಟಾಕಿ ಸಿಡಿಸಿದ್ದಾರೆ. ಬಳಿಕ ಇದೇ ಪ್ರಶ್ನೆಯನ್ನು ಸಲ್ಲುಗೆ ಕೇಳಲಾಯಿತು. "ನನ್ನ ಡಿನ್ನರ್ನಲ್ಲಿ ನಾನು ಮಾತ್ರ ಇದ್ದರೆ ಸಾಕು. ಸೀರಿಯಸ್ ಆಗಿ ಹೇಳುತ್ತಿದ್ದೇನೆ. ನಾನು ಲಂಚ್, ಡಿನ್ನರ್ ಮನೆಯಲ್ಲಿ ಕುಟುಂಬದ ಜತೆಗೆ ಮಾಡುತ್ತೇನೆ" ಎಂದಿದ್ದಾರೆ.
ಭಾರತ್ ಚಿತ್ರದಲ್ಲಿ ಸಲ್ಮಾನ್ ಖಾನ್, ಕತ್ರಿನಾ ಕೈಫ್, ದಿಶಾ ಪಠಾಣಿ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಭಾರತ್ ಸಿನಿಮಾವು ಕೊರಿಯನ್ ಸಿನಿಮಾದ 'ಓಡ್ ಟು ಮೈ ಫಾದರ್' ಚಿತ್ರದ ರಿಮೇಕ್ ಆಗಿದ್ದು, ಇದರಲ್ಲಿ ಸಲ್ಮಾನ್ ಖಾನ್ ಅವರು 5 ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ.