ಕೋಲ್ಕತ್ತಾ, ಅ.22(DaijiworldNews/AA): ಶ್ರೆಯಾ ಘೋಷಲ್ ಭಾರತದ ಖ್ಯಾತ ಗಾಯಕಿಯಾಗಿದ್ದು, ದೇಶದ ಹಲವಾರು ಭಾಷೆಗಳಲ್ಲಿ ಅವರು ಹಾಡಿದ್ದಾರೆ. ಅವರ ಲೈವ್ ಕಾನ್ಸರ್ಟ್ಗಳಿಗೆ ಸಾವಿರಾರು ಮಂದಿ ಅಭಿಮಾನಿಗಳು ಆಗಮಿಸುತ್ತಾರೆ. ಇತ್ತೀಚೆಗೆ ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿ ನಡೆದ ಶ್ರೆಯಾ ಘೋಷಲ್ ಅವರ ಲೈವ್ ಕಾನ್ಸರ್ಟ್ ನಲ್ಲಿ ಅವರು ಭಾವುಕರಾಗಿದ್ದು, ತಮ್ಮ ಹಾಡುಗಳಿಗೆ ಚಪ್ಪಾಳೆ ತಟ್ಟುವುದು ಬೇಡವೆಂದು ಜನರಲ್ಲಿ ಮನವಿ ಮಾಡಿದ್ದಾರೆ.
ಕೆಲ ತಿಂಗಳ ಹಿಂದೆ ನಡೆದ ಆರ್ಕೆ ಮೆಡಿಕಲ್ ಕಾಲೇಜು ವಿದ್ಯಾರ್ಥಿನಿಯ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳದಲ್ಲಿ ವೈದ್ಯರುಗಳು ಪ್ರತಿಭಟನೆ ನಡೆಸುತ್ತಲೇ ಇದ್ದಾರೆ. ಇದೀಗ ಈ ಪ್ರತಿಭಟನೆಗೆ ಗಾಯಕಿ ಶ್ರೆಯಾ ಘೋಷಲ್ ಕೂಡ ಗಾಯನದ ಮೂಲಕ ಬೆಂಬಲ ನೀಡಿದ್ದಾರೆ.
ಲೈವ್ ಕಾನ್ಸರ್ಟ್ ನಲ್ಲಿ ಶ್ರೇಯಾ ಘೋಷಲ್ ಅವರು, ಮೃತ ವೈದ್ಯ ವಿದ್ಯಾರ್ಥಿನಿಗಾಗಿ 'ಈ ಜೀ ಸೋರಿಯರ್, ಚಿತ್ಕಾರ್' ಎಂಬ ಬೆಂಗಾಲಿ ಭಾವುಕ ಹಾಡೊಂದನ್ನು ಹಾಡಿದ್ದಾರೆ. ಹಾಡು ಹಾಡುವ ಮುನ್ನ ಪ್ರೇಕ್ಷಕರೊಂದಿಗೆ ಮಾತನಾಡಿದ ಶ್ರೆಯಾ ಘೋಷಲ್, ಈ ಹಾಡಿಗೆ ಯಾರೂ ಸಹ ಚಪ್ಪಾಳೆ ತಟ್ಟಬೇಡಿ, ಈ ಹಾಡನ್ನು ಅರ್ಥ ಮಾಡಿಕೊಳ್ಳಿ, ಮೃತ ವಿದ್ಯಾರ್ಥಿನಿಯ ಆತ್ಮಕ್ಕೆ ಶಾಂತಿ ಕೋರಿ ಎಂದು ಮನವಿ ಮಾಡಿಕೊಂಡಿದ್ದಾರೆ.