ಬೆಂಗಳುರು, ಅ.20(DaijiworldNews/TA):ಕಿಚ್ಚ ಸುದೀಪ್ ಅವರ ತಾಯಿ ಸರೋಜಾ ಅವರು ಇಂದು ಮುಂಜಾನೆ ನಿಧಾನರಾಗಿದ್ದಾರೆ. ಅವರು ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಚಿಕಿತ್ಸೆಗಾಗಿ ಜಯನಗರದ ಅಪೋಲೊ ಆಸ್ಪತ್ರೆಗೆ ಇಂದು ಮುಂಜಾನೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಅವರು ಬೆಳಿಗ್ಗೆ 7 ಗಂಟೆಗೆ ನಿಧನ ಹೊಂದಿದ್ದಾರೆ.
ಕಿಚ್ಚ ಸುದೀಪ್ ಅವರ ತಾಯಿ ಸರೋಜಾ ಅವರು ಮಂಗಳೂರು ಮೂಲದವರಾಗಿದ್ದರು ಎಂದು ಹೇಳಲಾಗಿದೆ. ತುಳು ಅವರ ಮಾತೃಭಾಷೆಯಾಗಿತ್ತು. ಈ ಬಗ್ಗೆ ಸುದೀಪ್ ಹಿಂದೆ ಹೇಳಿಕೊಂಡಿದ್ದರು ಕೂಡ. ಸುದೀಪ್ರ ತಾಯಿಯವರು ಅವರೊಡನೆ ಜೆಪಿ ನಗರದ ನಿವಾಸದಲ್ಲಿಯೇ ನೆಲೆಸಿದ್ದರು.
ಕಿಚ್ಚ ಸುದೀಪ್ರ ತಾಯಿಯ ಪಾರ್ಥಿವ ಶರೀರವನ್ನು 11 ಗಂಟೆ ವೇಳೆಗೆ ಜೆಪಿ ನಗರ ನಿವಾಸಕ್ಕೆ ಕರೆತರಲಾಗುವುದು, ಸುದೀಪ್ ಮನೆಯ ಬಳಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕೂಡ ಮಾಡಲಾಗಿದೆ.