ಮುಂಬೈ, ಸೆ.26(DaijiworldNews/TA):ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ ಐಶ್ವರ್ಯಾ ರೈ ಎಂಬ ಪೋಸ್ಟ್ ಸದ್ಯ ವೈರಲ್ ಆಗುತ್ತಿದೆ. ಆದರೆ ಈ ಬಗ್ಗೆ ಮಾಜಿ ವಿಶ್ವಸುಂದರಿ ಅಧಿಕೃತ ಮಾಹಿತಿ ನೀಡಿಲ್ಲ.
ಬ್ರಾಂಡ್ ಲೋರಿಯಲ್ನ ಜಾಗತಿಕ ರಾಯಭಾರಿಯಾಗಿರುವ ಐಶ್ವರ್ಯಾ, 2024 ರ ಲೋರಿಯಲ್ ಪ್ಯಾರಿಸ್ ಫ್ಯಾಶನ್ ವೀಕ್ನಲ್ಲಿ ಕಾಣಿಸಿಕೊಂಡಿದ್ದರು. ಈ ವೇಳೆ ನಟಿ ಧರಿಸಿದ್ದ ಕೆಂಪು ಬಣ್ಣದ ಉಡುಗೆ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಸೋಶಿಯಲ್ ಮೀಡಿಯಾಗಳಲ್ಲಿ ಬಾಡಿ ಶೆಮಿಂಗ್ ರೀತಿಯಲ್ಲಿ ನಟಿ ಟ್ರೋಲ್ ಆಗುತ್ತಿದ್ದಂತೆ ರೆಡ್ಡಿಟ್ ಹಂಚಿಕೊಂಡಿರುವ ಪೋಸ್ಟ್ ಎಲ್ಲೆಡೆ ವೈರಲ್ ಆಗಿದೆ.
ನಾನು ಐಶ್ವರ್ಯ ಅವರನ್ನು ಸಾಕಷ್ಟು ವರ್ಷಗಳಿಂದ ನೋಡುತ್ತಿದ್ದೇನೆ. ಐಶ್ವರ್ಯಾ ಹಲವು ವರ್ಷಗಳಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಇದರಿಂದಾಗಿ ಡಯೆಟ್ಗೆ ಮಾಡುತ್ತಿಲ್ಲ, ಜೊತೆಗೆ ತೂಕ ಇಳಿಸಿಕೊಳ್ಳುವ ಯಾವುದೇ ಔಷಧಿಗಳನ್ನು ಆಕೆ ತೆಗೆದುಕೊಳ್ಳುತ್ತಿಲ್ಲ. ಆದರೆ ನಾನು ಅವರ ಆರೋಗ್ಯ ಸಮಸ್ಯೆಯ ಬಗ್ಗೆ ಬಹಿರಂಗಪಡಿಸುವುದಿಲ್ಲ” ಎಂದು ಪೋಸ್ಟ್ನಲ್ಲಿ ಬರೆಯಲಾಗಿದೆ.
ಪೋಸ್ಟ್ ವೈರಲ್ ಆಗುತ್ತಿದ್ದಂತೆ ಡಿಲೀಟ್ ಕೂಡಾ ಮಾಡಲಾಗಿದೆ. ಐಶ್ವರ್ಯಾ ರೈ ಬಚ್ಚನ್ ಅವರ ಆರೋಗ್ಯ ಸ್ಥಿತಿ, ವೈಯಕ್ತಿಕ ಜೀವನದ ಊಹಾಪೋಹಗಳ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.