ಪ್ಯಾರಿಸ್, ಸೆ.24(DaijiworldNews/AA): ಬಾಲಿವುಡ್ ಬೆಡಗಿ ನಟಿ ಐಶ್ವರ್ಯಾ ರೈ ಅವರು ಹೊಸ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಮಗಳ ಜೊತೆ ಪ್ಯಾರಿಸ್ನಲ್ಲಿರುವ ನಟಿ, ತಮ್ಮ ಹೊಸ ಸ್ಟೈಲ್ನಲ್ಲಿ ಮಿಂಚಿದ್ದಾರೆ.
ನಟಿ ಐಶ್ವರ್ಯಾ ರೈ ಅವರು ಪ್ಯಾರಿಸ್ ಫ್ಯಾಷನ್ ವೀಕ್ನಲ್ಲಿ ಭಾಗವಹಿಸಿದ್ದಾರೆ. ಅದಕ್ಕಾಗಿ ಹೊಸ ಸ್ಟೈಲ್ನಲ್ಲಿ ಕಾಣಿಸಿಕೊಂಡಿರುವ ಅವರು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದಾರೆ. ಇನ್ನು ನಟಿಯ ಯೂನಿಕ್ ಲುಕ್ ನೋಡಿ ಕೆಲವರು ಖುಷಿಪಟ್ಟರೆ, ಇನ್ನೂ ಕೆಲವರು ನಿಮ್ಮ ಸ್ಟೈಲೀಶ್ ಅನ್ನು ಬದಲಿಸಿ ಎಂದಿದ್ದಾರೆ.
ಇನ್ನು ಕಳೆದ ಕೆಲವು ತಿಂಗಳುಗಳಿಂದ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ವಿಚ್ಛೇದನ ಪಡೆಯಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಆದರೆ ನಟಿ ಪ್ಯಾರಿಸ್ನಲ್ಲಿ ತಮ್ಮ ಮದುವೆಯ ಉಂಗುರ ಧರಿಸುವ ಮೂಲಕ ಇದಕ್ಕೆಲ್ಲಾ ತೆರೆ ಎಳೆದಿದ್ದರು.