ನವದೆಹಲಿ,ಮೇ30(DaijiworldNews/AZM):ಬಾಲಿವುಡ್ ಸುಂದರಿ ಕತ್ರಿನಾ ಅಭಿನಯಿಸಿರುವ ಭಾರತ್ ಚಿತ್ರ ಬಿಡುಗಡೆಗೆ ಸಿದ್ಧವಾಗಿ ನಿಂತಿದೆ. ಹಾಗಾಗಿ ಅವರು ಚಿತ್ರದ ಪ್ರಚಾರ ಕಾರ್ಯದಲ್ಲಿ ಫುಲ್ ಬ್ಯುಸಿಯಾಗಿದ್ದಾರೆ.
ಈ ನಡುವೇ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿರುವ ಕತ್ರೀನಾ ರಣಬೀರ್ ಕಪೂರ್ ಜೊತೆ ಸಂಬಂಧ ಕಡಿತವಾದ ಬಳಿಕ ಉಂಟಾದ ಸಮಸ್ಯೆಗಳನ್ನು ಹಂಚಿಕೊಂಡಿದ್ದಾಳೆ. ಬ್ರೇಕ್ ಅಪ್ ನನಗೆ ದೊಡ್ಡ ಆಘಾತ ತಂದಿತ್ತು. ಇದಾದ ನಂತ್ರ ನನ್ನ ವೈಯಕ್ತಿಕ ಹಾಗೂ ವೃತ್ತಿ ಜೀವನದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ನನ್ನ ಕೊನೆ ಸಂಬಂಧ ಕೊನೆಗೊಂಡಾಗ ನಾನು ನನ್ನ ಜೀವನದ ಬಗ್ಗೆ ಹಾಗೂ ನನ್ನ ವ್ಯಕ್ತಿತ್ವದ ಬಗ್ಗೆ ಸಾಕಷ್ಟು ವಿಶ್ಲೇಷಣೆ ಮಾಡಿಕೊಂಡಿದ್ದೆ. ಆಗಬೇಕಾಗಿದ್ದು, ಆಗಿದೆ. ಇದಕ್ಕೂ ಒಂದು ಕಾರಣವಿರುತ್ತದೆ ಎಂದು ಕತ್ರಿನಾ ಹೇಳಿದ್ದಾರೆ.
ಥೈಲ್ಯಾಂಡ್ ಗೆ ಚಿತ್ರೀಕರಣಕ್ಕೆಂದು ವಿಮಾನದಲ್ಲಿ ಹೋಗ್ತಾಯಿದ್ದೆ. ಆಗ ನನ್ನ ಮನಸ್ಸಿನಲ್ಲಾಗ್ತಿದ್ದ ಗೊಂದಲವನ್ನು ವಿವರಿಸಲು ಸಾಧ್ಯವಿಲ್ಲ. ಕೆಲವೊಂದು ಸಂಗತಿಗಳು ನಾವು ಬೇಡವೆಂದ್ರೂ ನಮ್ಮನ್ನು ಬಿಡುವುದಿಲ್ಲ. ಅದೇ ದಿನ ರಾತ್ರಿ ನನ್ನ ವ್ಯಕ್ತಿತ್ವದಲ್ಲಿ ಸಾಕಷ್ಟು ಬದಲಾವಣೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದೆ. ನಾನು ಜಗತ್ತು ನೋಡುವ ದೃಷ್ಟಿ ಬದಲಾಗಿತ್ತು ಎಂದು ಕತ್ರಿನಾ ಹೇಳಿದ್ದಾರೆ.
ನಮಗೆ ತೊಂದರೆ ನೀಡುವ ಸಂಗತಿಗಳಿಂದ ಎಂದೂ ಓಡಿ ಹೋಗಬಾರದು. ಅದನ್ನು ಎದುರಿಸಬೇಕು. ನಾವು ಓಡಿ ಹೋದಷ್ಟು ಅದು ನಮ್ಮನ್ನು ಹಿಂಬಾಲಿಸಿ ಬರುತ್ತದೆ ಎಂದು ಕತ್ರಿನಾ ಹೇಳಿದ್ದಾಳೆ.
ಅಂತೂ ಹೊಸ ಚಿತ್ರ ಬಿಡುಗಡೆಗೊಳ್ಳುತ್ತಿರುವ ಖುಷಿಯಲ್ಲಿ ಕತ್ರೀನಾ ಕೈಫ್ ಇದ್ದರೂ ಕೂಡಾ ಅದರ ನಡುವೆ ಅವರ ನೋವನ್ನು ಅವರು ಹಂಚಿಕೊಂಡಿದ್ದಾರೆ. ಏನೇ ಆಗಲಿ ಅವರ ಹೊಸ ಚಿತ್ರ ಯಶಸ್ವಿಯತ್ತ ಹೋಗಲಿ ಎಂದು ಹಾರೈಸುವ.