ಬೆಂಗಳೂರು,ಸೆ.11 (DaijiworldNews/TA):ನಕಲಿ ಜನರು ಮುಖವಾಡ ಹಾಕೊಂಡು ಬದುಕ್ತಾರೆ. ಅದನ್ನು ಅವರು ಮೆಂಟೇನ್ ಮಾಡಬೇಕಾಗುತ್ತದೆ. ಆದರೆ ಅಸಲಿ ಜನ ಯಾವುದಕ್ಕೂ ಕೇರ್ ಮಾಡಲ್ಲ ಎಂಬ ರಚಿತಾ ರಾಮ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಹೌದು, ಇನ್ಸ್ಟಾಗ್ರಾಮ್ನಲ್ಲಿ ದಿಢೀರನೆ ರಚಿತಾ ರಾಮ್ ಮಾಡಿರುವ ಪೋಸ್ಟ್ ಭಾರೀ ಚರ್ಚೆಗೆ ಕಾರಣವಾಗಿದೆ. ಈ ರೀತಿ ಪೋಸ್ಟ್ ಮಾಡಿ ರಚ್ಚು ಸೈಲೆಂಟ್ ಆಗಿದ್ದಾರೆ. ಅದಕ್ಕೆ ಶಾಂತಿಯ ಎಮೋಜಿ ಹಾಕಿದ್ದಾರೆ. ಆದರೆ ಈ ಸಾಲಿನ ಅರ್ಥ ಏನು? ಆಕೆ ಈ ರೀತಿ ಹೇಳಿದ್ದು ಯಾರಿಗೆ? ಎನ್ನುವ ಬಗ್ಗೆ ಗಲ್ಲಾಪೆಟ್ಟಿಗೆಯಲ್ಲಿ ಚರ್ಚೆ ನಡೆಯುತ್ತಿದೆ.
ಕಾಮೆಂಟ್ ಬಾಕ್ಸ್ನಲ್ಲೇ ಹಲವು ಅಭಿಪ್ರಾಯ ವ್ಯಕ್ತವಾಗುತ್ತಿದೆ. ಯಾರಿಗೋ ಟಾಂಗ್ ಕೊಡುವ ರೀತಿಯಲ್ಲಿ ಈ ಪೋಸ್ಟ್ ಇದೆ. ಇದ್ದಕ್ಕಿದಂತೆ ರಚಿತಾ ರಾಮ್ ಯಾಕೆ ಈ ರೀತಿ ಪೋಸ್ಟ್ ಮಾಡಿದ್ದಾರೆ ಎನ್ನುವ ಬಗ್ಗೆ ಅಭಿಮಾನಿಗಳಲ್ಲಿ ಪ್ರಶ್ನೆ ಹುಟ್ಟು ಹಾಕಿದೆ.