ಮುಂಬೈ, ಸೆ.10(DaijiworldNews/AA): ನಟಿ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಅವರ ಮಗುವಿಗಾಗಿ ಕಾಂಟ್ರವರ್ಸಿ ಕ್ವೀನ್ ರಾಖಿ ಸಾವಂತ್ ಅವರು ದುಬೈನಲ್ಲಿ ಶಾಪಿಂಗ್ ಮಾಡಿದ್ದಾರೆ.
ಸದ್ಯ ರಾಖಿ ಸಾವಂತ್ ಅವರು ದುಬೈನಲ್ಲಿದ್ದಾರೆ. ದೀಪಿಕಾ ಅವರಿಗೆ ಹೆಣ್ಣು ಮಗು ಜನಿಸಿದ್ದಾಗಿ ಖುಷಿಪಟ್ಟಿರುವ ಅವರು, ಮಗುವುಗಾಗಿ ಒಂದಷ್ಟು ಆಟಿಕೆಗಳನ್ನು ದುಬೈನ ಮಾಲ್ವೊಂದರಲ್ಲಿ ಖರೀದಿಸಿದ್ದಾರೆ. ದುಬೈನಿಂದಲೇ ಅವರು ಒಂದು ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ರಾಖಿ ಸಾವಂತ್ ಹಂಚಿಕೊಂಡಿರುವ ವಿಡಿಯೋದಲ್ಲಿ ಅವರು, 'ದೀಪಿಕಾ, ರಣವೀರ್? ಸಿಂಗ್?.. ನಾನು ಆಂಟಿ ಆದೆ. ದೀಪಿಕಾ ಪಡುಕೋಣೆ ನಿಮಗೆ ನೆನಪಿದೆಯೇ? ನಾವಿಬ್ಬರೂ ಒಟ್ಟಿಗೆ ಡ್ಯಾನ್ಸ್ ಕ್ಲಾಸ್?ಗೆ ಹೋಗಿದ್ದೆವು. ಇಬ್ಬರೂ ಒಟ್ಟಿಗೆ ವೃತ್ತಿ ಜೀವನ ಶುರು ಮಾಡಿದ್ದೆವು. ನೀವು ದೊಡ್ಡ ಸ್ಟಾರ್? ಆದ್ರಿ, ಹೆಂಡತಿ ಆದ್ರಿ. ಈಗ ತಾಯಿಯೂ ಆಗಿದ್ದೀರಿ ಎಮದಿದ್ದಾರೆ.
ಈ ವಿಡಿಯೋವನ್ನು ನೋಡಿದ ಕಟಲ ನೆಟ್ಟಿಗರು ಸಖತ್ ಟ್ರೋಲ್ ಮಾಡಿದ್ದಾರೆ. 'ದೀಪಿಕಾ ಪಡುಕೋಣೆಗೆ ಮಗು ಜನಿಸಿದ್ದಕ್ಕೆ ರಾಖಿ ಸಾವಂತ್? ಬಿಟ್ಟಿ ಪ್ರಚಾರ ಪಡೆಯುತ್ತಿದ್ದಾರೆ' ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ರಾಖಿ ಸಾವಂತ್ ಪರ ನಿಂತಿದ್ದು, 'ರಾಖಿ ಸಾವಂತ್? ಮನಸ್ಸು ದೊಡ್ಡದು. ಅವರು ಎಲ್ಲರಿಗೂ ಪ್ರೀತಿ ನೀಡುತ್ತಾರೆ. ಆದರೆ ಅವರಿಗೆ ನಿಜವಾದ ಪ್ರೀತಿ ಸಿಗುತ್ತಿಲ್ಲ. ಅವರನ್ನು ಯಾರೂ ಅರ್ಥ ಮಾಡಿಕೊಳ್ಳುತ್ತಿಲ್ಲ' ಎಂದು ಕಮೆಂಟ್ ಮಾಡಿದ್ದಾರೆ.