ಮುಂಬೈ, ಸೆ.7(DaijiworldNews/AA): ನಟಿ ದೀಪಿಕಾ ಪಡುಕೋಣೆ ಇಂದು ಸಂಜೆ ವೇಳೆ ದಕ್ಷಿಣ ಮುಂಬೈನ ಎಚ್ಎನ್ ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ನಟಿ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಅವರು ತಮ್ಮ ಇತರೆ ಕುಟುಂಬ ಸದಸ್ಯರೊಟ್ಟಿಗೆ ಇಂದು ಸಂಜೆ ಆಸ್ಪತ್ರೆಗೆ ತೆರಳಿದ್ದಾರೆ. ರಣವೀರ್ ದೀಪಿಕಾ ಅವರುಗಳು ಆಸ್ಪತ್ರೆ ಒಳಗೆ ಹೋಗುತ್ತಿರುವ ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ದೀಪಿಕಾ ಪಡುಕೋಣೆ ಅವರಿಗೆ ಇದೇ ತಿಂಗಳ 28 ಕ್ಕೆ ಡೇಟ್ ಕೊಡಲಾಗಿತ್ತು. ಆದರೆ ಸೆಪ್ಟೆಂಬರ್ 20ರ ಮೇಲೆಯೇ ದೀಪಿಕಾಗೆ ಮಗು ಆಗಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಇಂದು ದಿಢೀರ್ ಆಗಿ ದೀಪಿಕಾ-ರಣವೀರ್ ಸಿಂಗ್ ಅವರು ಆಸ್ಪತ್ರೆಗೆ ಆಗಮಿಸಿರುವುದನ್ನು ಗಮನಿಸಿದರೆ ಶೀಘ್ರವಾಗಿ ಅಥವಾ ಇಂದೇ ದೀಪಿಕಾಗೆ ಮಗು ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.