ಬೆಂಗಳೂರು, ಸೆ.04 (DaijiworldNews/AK):ಸಿನಿಮಾಕ್ಷೇತ್ರದಲ್ಲಿ ಮಹಿಳೆಯರ ಸಮಸ್ಯೆ ಕುರಿತು ಮಲಯಾಳಂ ಸಿನಿಮಾರಂಗದಲ್ಲಿ ರಚನೆಯಾದ ಹೇಮಾ ಕಮಿಟಿ ವರದಿಯ ಮಾದರಿಯಲ್ಲಿ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲೂ ತನಿಖಾ ಸಮಿತಿ ರಚಿಸುವ ಕುರಿತು ಇದೀಗ ಒತ್ತಾಯ ಕೇಳಿ ಬಂದಿದೆ.
ಮಲಯಾಳಂ ಚಿತ್ರರಂಗದಲ್ಲಿ ಲೈಂಗಿಕ ಕಿರುಕುಳ ಭುಗಿಲೆದ್ದ ಹಿನ್ನೆಲೆ ಸ್ಯಾಂಡಲ್ವುಡ್ನಲ್ಲೂ ‘ಫೈರ್’ ಹೆಸರಲ್ಲಿ ತನಿಖಾ ಸಮಿತಿ ರಚಿಸುವ ಕುರಿತು ಸರ್ಕಾರಕ್ಕೆ ಬೇಡಿಕೆ ಇಡಲಾಗಿದೆ.
ಫಿಲ್ಮ್ ಇಂಡಸ್ಟ್ರಿ ಫಾರ್ ರೈಟ್ಸ್ ಅಂಡ್ ಇಕ್ವಾಲಿಟಿ ಎಂಬ ಉದ್ದೇಶದಿಂದ ಫೈರ್ ರಚಿಸಲು ಚಿತ್ರರಂಗದಲ್ಲಿ ಅನೇಕರು ಒತ್ತಾಯಿಸಿದ್ದಾರೆ. ಕನ್ನಡ ಚಿತ್ರೋದ್ಯಮದಲ್ಲಿ ಮಹಿಳೆಯರು ಎದುರಿಸುತ್ತಿರುವ ಲೈಂಗಿಕ ಕಿರುಕುಳ ಸೇರಿದಂತೆ, ಲಿಂಗ ತಾರತಮ್ಯ, ಸವಾಲುಗಳು, ಸಮಸ್ಯೆಗಳನ್ನು ಅಧ್ಯಯನ ಮಾಡಿ ವರದಿ ಮಾಡಲು ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚಿಸುವಂತೆ ಸರ್ಕಾರಕ್ಕೆ ಫೈರ್ ಸಂಸ್ಥೆ ಒತ್ತಾಯ ಮಾಡಿದೆ. ಉದ್ಯಮದ ಹಾಗೂ ವಿವಿಧ ಕ್ಷೇತ್ರಗಳ 153 ನಟಿಯರು ತಂತ್ರಜ್ಞರು ಪತ್ರಕರ್ತರು ಅರ್ಜಿಗೆ ಸಹಿ ಹಾಕಿ ಒತ್ತಾಯಿಸಿದ್ದಾರೆ.
ಚಿತ್ರರಂಗದಲ್ಲಿ ಮಹಿಳೆಯರು ಆರೋಗ್ಯಕರವಾಗಿ ಹಾಗೂ ಸಮಾನವಾಗಿ ಕೆಲಸ ಮಾಡುವಂತೆ ನಿಯಮಗಳನ್ನು ತರುವಂತೆ ಫೈರ್ ಸಂಸ್ಥೆ ಸಿಎಂಗೆ ಮನವಿ ಮಾಡಿದೆ.‘ಫೈರ್’ ಸಂಸ್ಥೆಯ ಮೂಲಕ ಆ ದಿನಗಳು ಖ್ಯಾತಿಯ ಚೇತನ್ ಮನವಿ ಮಾಡಿದ್ದಾರೆ.
2017ರಲ್ಲಿ ಸ್ಥಾಪನೆಯಾದ ಆಂತರಿಕ ದೂರು ಸಮಿತಿ. ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಲೈಂಗಿಕ ಕಿರುಕುಳ ಹಾಗೂ ಇತರ ಸಮಸ್ಯೆಗಳು ಎದುರಾದರೆ, ಅದನ್ನು ವಿರುದ್ಧ ಹೋರಾಡುವ ಒಂದು ಕಮಿಟಿ.