ಬೆಂಗಳೂರು, ಆ.26(DaijiworldNews/TA):ಸ್ಯಾಂಡಲ್ವುಡ್ ಚಿನ್ನಾರಿಮುತ್ತ ಅಗಲಿದ ಪತ್ನಿಯನ್ನು ನೆನೆದು ಹ್ಯಾಪಿ ಆ್ಯನಿವರ್ಸರಿ ಚಿನ್ನ ಎಂದು ಭಾವುಕವಾಗಿ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.
ಇಂದು ಸ್ಯಾಂಡಲ್ವುಡ್ ನಟ ವಿಜಯ್ ರಾಘವೇಂದ್ರ ಮತ್ತು ಸ್ಪಂದನಾ ದಾಂಪತ್ಯ ಜೀವನದ ವಾರ್ಷಿಕೋತ್ಸವ. ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟು 17 ವರ್ಷಗಳು ಕಳೆದಿವೆ. ಈ ಕಾರಣದಿಂದಲೇ ನಟ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ.
ನಟ ವಿಜಯ್ ರಾಘವೇಂದ್ರ ಹ್ಯಾಪಿ ಆ್ಯನಿವರ್ಸರಿ ಚಿನ್ನ ಎಂದು ವಿಶ್ ಮಾಡಿ, ಸ್ಪಂದನಾ ಜೊತೆಗಿನ ಹಳೆಯ ಫೋಟೋವೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಬಿ ಮೈ ಲೈಟ್ ಅಂತಲೂ ಹೇಳಿಕೊಂಡಿದ್ದಾರೆ.
ಕಳೆದ ವರ್ಷ ಆಗಸ್ಟ್ 7ರಂದು ಹೃದಯಾಘಾತದಿಂದ ಸ್ಪಂದನಾ ಬ್ಯಾಂಕಾಕ್ನಲ್ಲಿ ನಿಧನರಾದರು. ವರದಿಗಳ ಪ್ರಕಾರ ವಿಜಯ್ ರಾಘವೇಂದ್ರ ಅವರ ಪತ್ನಿಗೆ ಕಡಿಮೆ ರಕ್ತದೊತ್ತಡ ಇತ್ತು, ಇದು ಹೃದಯಾಘಾತಕ್ಕೆ ಕಾರಣ ಎಂದು ಹೇಳಲಾಗಿದೆ.