ಮುಂಬೈ, ಆ.23(DaijiworldNews/AA): ಬಾಲಿವುಡ್ ನಟಿ ಸಾರಾ ಅಲಿ ಖಾನ್ ಅವರ ಮದುವೆ ಫಿಕ್ಸ್ ಆಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದು ಚರ್ಚೆಗೆ ಗ್ರಾಸವಾಗಿದೆ.
ಸದ್ಯ ನಟಿಗೆ ಸಿನಿಮಾದಲ್ಲಿ ಅವಕಾಶಗಳು ಕಡಿಮೆಯಾಗಿದ್ದು, ಇದರಿಂದ ಸಾರಾ ಮದುವೆಗೆ ಸಿದ್ಧತೆ ನಡೆಯುತ್ತಿದೆ ಎನ್ನಲಾಗಿದೆ. ಲಂಡನ್ ಉದ್ಯಮಿಯೋರ್ವನೊಂದಿಗೆ ಸಾರಾ ಅವರ ನಿಶ್ಚಿತಾರ್ಥ ನಡೆಯಲಿದೆ, ಮುಂದಿನ ವರ್ಷ ಅಂತ್ಯದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ಹೇಳಲಾಗಿದೆ.
ಈ ಹಿಂದೆ ಸಾರಾ ಅವರು ಸುಶಾಂತ್ ಸಿಂಗ್ ರಜಪೂತ್, ಕಾರ್ತಿಕ್ ಆರ್ಯನ್, ಶುಭಮನ್ ಗಿಲ್ ಸೇರಿದಂತೆ ಅನೇಕರೊಂದಿಗೆ ನಟಿ ಡೇಟಿಂಗ್ ಮಾಡುತ್ತಿದ್ದರು ಎನ್ನಲಾಗುತ್ತಿದೆ. ಆದರೆ ಈ ಯಾವುದೇ ವಿಚಾರಕ್ಕೂ ಸ್ಪಷ್ಟನೆ ದೊರಕಿರಲಿಲ್ಲ. ಈಗ ಲಂಡನ್ ಉದ್ಯಮಿ ಜೊತೆಗಿನ ಮದುವೆ ಸುದ್ದಿ, ನಿಜವೋ ಅಥವಾ ಗಾಸಿಪ್ ಎಂಬ ಬಗ್ಗೆ ನಟಿ ಸಾರಾ ಸ್ಪಷ್ಟನೆ ನೀಡಬೇಕಿದೆ.