ಮುಂಬೈ, ಆ.18(DaijiworldNews/AA): ಶಾರುಖ್ ಖಾನ್, ಸಲ್ಮಾನ್ ಖಾನ್, ಆಮೀರ್ ಖಾನ್, ಅಕ್ಷಯ್ ಕುಮಾರ್ ಮತ್ತು ರಣಬೀರ್ ಕಪೂರ್ ಅವರೊಂದಿಗೆ ಚಲನಚಿತ್ರಗಳನ್ನು ಮಾಡದೆಯೇ ನಟಿಯರು ಬಾಲಿವುಡ್ನಲ್ಲಿ ಛಾಪು ಮೂಡಿಸಬಹುದು. ನಾನು ಯಾವಾಗಲೂ ಖಾನ್ ಚಿತ್ರಗಳನ್ನು ಮಾಡಲು ಇಚ್ಟ ಪಡುವುದಿಲ್ಲ ಎಂದು ನಟಿ ಕಂಗನಾ ರಾಣಾವತ್ ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿರುವ ನಟಿ, ನಾನು ಖಾನ್ ನಾಯಕತ್ವದ ಚಿತ್ರಗಳನ್ನು ನಿರಾಕರಿಸಿದೆ. ಎಲ್ಲಾ ಖಾನ್ಗಳು ತುಂಬಾ ಒಳ್ಳೆಯವರು. ನನ್ನೊಂದಿಗೆ ಎಂದಿಗೂ ಅನುಚಿತವಾಗಿ ವರ್ತಿಸಲಿಲ್ಲ. ಹೌದು, ನನ್ನೊಂದಿಗೆ ಅನುಚಿತವಾಗಿ ವರ್ತಿಸಿದವರೂ ಇದ್ದಾರೆ. ಅವರುಗಳ ಸಿನಿಮಾಗಳಲ್ಲಿ ನಾಯಕಿಯರನ್ನು ಕೇವಲ ಎರಡು ದೃಶ್ಯಗಳು ಮತ್ತು ಒಂದು ಹಾಡಿಗೆ ಮಾತ್ರ ಸಿಮೀತ ಮಾಡುತ್ತಾರೆ. ನಾನು ಎ-ಲಿಸ್ಟರ್ ಮಹಿಳೆಯಾಗಿ ಇರಲು ಬಯಸುತ್ತೇನೆ, ಖಾನ್ಗಳೊಂದಿಗೆ ಕೆಲಸ ಮಾಡದ ಟಾಪ್-ಮೋಸ್ಟ್ ನಟಿ ನಾನು ಎಂದಿದ್ದಾರೆ.
ನನ್ನ ನಂತರ ಬರಲಿರುವ ಮಹಿಳೆಯರಿಗೆ ನನ್ನ ಕೈಲಾದದ್ದನ್ನು ಸಹಾಯ ಮಾಡಲು ಬಯಸುತ್ತೇನೆ. ಯಾವುದೇ ಖಾನ್ಗಳು ನಿಮ್ಮನ್ನು ಯಶಸ್ವಿಯಾಗಿಸಲು ಸಾಧ್ಯವಿಲ್ಲ, ಯಾವುದೇ ಕುಮಾರ್ ನಿಮ್ಮನ್ನು ಯಶಸ್ವಿಯಾಗಿಸಲು ಸಾಧ್ಯವಿಲ್ಲ, ಯಾವುದೇ ಕಪೂರ್ ನಿಮ್ಮನ್ನು ಯಶಸ್ವಿಯಾಗಿಸಲು ಸಾಧ್ಯವಿಲ್ಲ. ನಾನು ರಣಬೀರ್ ಕಪೂರ್ ಅವರ ಚಿತ್ರಗಳಿಗೆ ನೋ ಹೇಳಿದೆ, ಅಕ್ಷಯ್ ಕುಮಾರ್ ಅವರ ಚಿತ್ರಗಳಿಗೆ ನಾನು ನೋ ಹೇಳಿದೆ. ನಾಯಕನೊಬ್ಬನೇ ನಾಯಕಿಯನ್ನು ಯಶಸ್ವಿಗೊಳಿಸಬಲ್ಲ ಎಂಬ ಮೂಲಮಾದರಿಯಾಗಲು ನಾನು ಬಯಸಲಿಲ್ಲ ಎಂದು ತಿಳಿಸಿದ್ದಾರೆ.